ಯುಎಸ್ ರಾಜ್ಯ ಲೂಸಿಯಾನದಲ್ಲಿ 2021 ರಲ್ಲಿ 5 ವರ್ಷದ ಭಾರತೀಯ ಮೂಲದ ಬಾಲಕಿಯನ್ನು ಕೊಂದ ವ್ಯಕ್ತಿಗೆ 100 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಶ್ರೆವ್‌ಪೋರ್ಟ್‌ನ ಜೋಸೆಫ್ ಲೀ ಸ್ಮಿತ್ ಗೆ ಜನವರಿಯಲ್ಲಿ ಮಾಯಾ ಪಟೇಲ್ ಹತ್ಯೆಯ ಅಪರಾಧ ಸಾಬೀತಾದ ನಂತರ ಶಿಕ್ಷೆ ವಿಧಿಸಲಾಯಿತು.
ಪಟೇಲ್ ಮಾಂಕ್ ಹೌಸ್ ಡ್ರೈವ್‌ನಲ್ಲಿರುವ ಹೋಟೆಲ್ ಕೋಣೆಯಲ್ಲಿ ಆಟವಾಡುತ್ತಿದ್ದಾಗ ಗುಂಡು ಆಕೆಯ ಕೋಣೆಗೆ ನುಗ್ಗಿ ಆಕೆಯ ತಲೆಗೆ ಅಪ್ಪಳಿಸಿತು. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಮೂರು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ಬಾಲಕಿ ಮಾರ್ಚ್ 23, 2021 ರಂದು ಮೃತಪಟ್ಟಳು.
ಸೂಪರ್ 8 ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಸ್ಮಿತ್ ಇನ್ನೊಬ್ಬ ವ್ಯಕ್ತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ಆ ಸಮಯದಲ್ಲಿ ಸ್ಮಿತ್ ವ್ಯಕ್ತಿಗೆ 9ಎಂಎಂ ಕೈಬಂದೂಕಿನಿಂದ ಗುಂಡು ಹೊಡೆದಿದ್ದು, ಅದು ವ್ಯಕ್ತಿಗೆ ತಗುಲದೇ ಹೋಟೆಲ್ ಕೋಣೆಯಲ್ಲಿದ್ದ ಮಾಯಾ ಪಟೇಲ್ ತಲೆಗೆ ತಗುಲಿತ್ತು.
ಮಾರ್ಚ್ 2021 ರಲ್ಲಿ ಮಾಯಾ ಪಟೇಲ್ ಹತ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶ ಜಾನ್ ಡಿ ಮೋಸ್ಲಿ ಅವರು ಸ್ಮಿತ್‌ಗೆ 60 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಗುರುವಾರ, ಕ್ಯಾಡೋ ಪ್ಯಾರಿಷ್ ಜಿಲ್ಲಾ ಅಟಾರ್ನಿ ಕಚೇರಿ ಸ್ಮಿತ್ ಪುನರಾವರ್ತಿತ ಅಪರಾಧ ಅಪರಾಧಿಯಾಗಿರುವುದರಿಂದ ಶಿಕ್ಷೆಯ ನಿಯಮಗಳನ್ನು ಹೆಚ್ಚಿಸಲಾಗಿದೆ. ಯಾವುದೇ ವಿನಾಯಿತಿ ಇಲ್ಲದೇ ಒಟ್ಟು 100 ವರ್ಷಗಳವರೆಗೆ ಸತತವಾಗಿ ಜೈಲಿನಲ್ಲಿ ಕಾರ್ಮಿಕನಾಗಿ ಸೇವೆ ಸಲ್ಲಿಸುವ ಕಠಿಣ ಶಿಕ್ಷೆ ನೀಡಲಾಗಿದೆ ಎಂದು ತಿಳಿಸಿದೆ.