ಗ್ರಾಹಕರನ್ನು ಸೆಳೆಯಲು ರೆಸ್ಟೋರೆಂಟ್ ಬ್ರಾಂಡುಗಳು ಏನೇನೋ ಆಯ್ಕೆಗಳೊಂದಿಗೆ ಸದಾ ಪ್ರಯೋಗ ಮಾಡುತ್ತಿರುತ್ತವೆ. ನ್ಯೂಜಿಲೆಂಡ್‌ನ ಪಿಜ್ಝಾ ರೆಸ್ಟೋರೆಂಟ್ ಸರಪಳಿ ಒಂದು ಇದೇ ಮೊದಲ ಬಾರಿಗೆ ಎನ್ನುವಂಥ ಪಾವತಿ ಆಯ್ಕೆಯೊಂದನ್ನು ತಂದಿದೆ.
’ಜೀವಿತಾವಧಿಯ ಬಳಿಕದ ಪಾವತಿ’ ಹೆಸರಿನ ಈ ಪಾವತಿ ಆಯ್ಕೆಯನ್ನು ನ್ಯೂಜಿಲೆಂಡ್‌ನ ’ಹೆಲ್ಸ್ ಪಿಜ್ಝಾ’ ಪರಿಚಯಿಸಿದೆ. ಗ್ರಾಹಕರ ಮನೆ ಬಾಗಿಲಿಗೆ ಪಿಜ್ಝಾ ಡೆಲಿವರಿ ಮಾಡುವ ವೇಳೆ ಈ ಹೊಸ ಆಯ್ಕೆಯನ್ನು ಹೆಲ್ಸ್ ಕೊಡಮಾಡುತ್ತಿದೆ. ,
666 ಗ್ರಾಹಕರಿಗೆ ಈ ಆಯ್ಕೆ ನೀಡಲಾಗುತ್ತಿದೆ. ಗ್ರಾಹಕರು ತಮ್ಮ ವಿಲ್‌ನಲ್ಲಿ ಒಂದೆರಡು ಸಾಲು ಸೇರಿಸಿ, ತಮ್ಮ ಮರಣಾನಂತರ ತಾವು ಈ ಅವಕಾಶದಲ್ಲಿ ತಿಂದ ಪಿಜ್ಝಾದ ಬಿಲ್ ಪಾವತಿ ಮಾಡುವುದಾಗಿ ಒಪ್ಪಂದ ಮಾಡಬೇಕಾಗುತ್ತದೆ.
ಈ ಕುರಿತು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಹೆಲ್ ಪಿಜ್ಝಾ, “ಹೆಲ್‌ನಲ್ಲಿ ಪಿಜ್ಝಾ ತಿನ್ನುವುದನ್ನು ಈಗ ನಿಮಗಾಗಿ ಇನ್ನಷ್ಟು ಸರಳಗೊಳಿಸುತ್ತಿದ್ದೇವೆ. ಪರಿಚಯಿಸುತ್ತಿದ್ದೇವೆ ಮರಣಾನಂತರದ ಪಾವತಿ – …….. ತಡವಾಗಿ ಪಾವತಿ ಮಾಡುವ ಆಯ್ಕೆಯನ್ನು ನಿಮಗೆ ಕೊಡುವ ಹೊಸ ವಿಧಾನ,” ಎಂದು ಈ ಆಫರ್ ಕುರಿತಾಗಿ ಕ್ಯಾಪ್ಷನ್ ಕೊಟ್ಟಿದೆ.