
ಬಹು ಸಂಸ್ಕೃತಿ ಹಾಗೂ ಆಚರಣೆಗಳ ನಾಡಾದ ಭಾರತದಲ್ಲಿ ಪ್ರತಿಯೊಂದು ಹಬ್ಬವನ್ನೂ ವಿವಿಧ ಥೀಂಗಳಲ್ಲಿ ಆಚರಿಸಲಾಗುತ್ತದೆ.
200 ವರ್ಷ ಹಳೆಯ ಶಾಪವೊಂದರ ಕಥೆಯನ್ನು ಆಧರಿಸಿ ಸೀರೆಯುಟ್ಟುಕೊಂಡ ಪುರುಷರು ಗರ್ಭಾ ನೃತ್ಯ ಮಾಡಿ ಮಹಿಳೆಯರನ್ನು ಮನವೊಲಿಸುವ ಯತ್ನ ಮಾಡಿದ ಘಟನೆ ಅಹಮದಾಬಾದ್‌ನಲ್ಲಿ ಜರುಗಿದೆ.
’ಶೇರಿ ಗರ್ಬಾ’ ಎಂದು ಕರೆಯಲಾಗುವ ಈ ರೀತಿಯ ಗರ್ಬಾ ಆಚರಣೆಯಲ್ಲಿ – ಬಾರೊಟ್ ಸಮುದಾಯಕ್ಕೆ ಸೇರಿದ ಪುರುಷರು, ನವರಾತ್ರಿಯ ಎಂಟನೇ ದಿನದಂದು ಸೀರೆಯುಟ್ಟುಕೊಂಡು ಸಾದು ಮಾತಾ ನಿ ಪೋಲ್‌ನಲ್ಲಿ ಗರ್ಬಾ ನೃತ್ಯ ಮಾಡುತ್ತಾರೆ.
ನಿಮ್ಮ ಬಳಿ ಇದೆಯಾ ಈ 1 ರೂ. ಮುಖಬೆಲೆಯ ನೋಟು…? ಹಾಗಾದ್ರೆ ನೀವು ಗಳಿಸ್ತೀರಿ ಲಕ್ಷ ಲಕ್ಷ
ಸಾಬುದಾ ಹೆಸರಿನ ಮಹಿಳೆಯೊಬ್ಬರು ತನ್ನ ಮಾನ ಕಾಪಾಡಲಾಗದ ಪುರುಷರಿಗೆ ಶಾಪ ಕೊಟ್ಟಿದ್ದು, ಇದೇ ವೇಳೆ ತನ್ನ ಮಗುವನ್ನೂ ಕಳೆದುಕೊಂಡಿದ್ದರು ಎಂಬ ಕಥೆ ಇದೆ. ಆಕೆಯ ಶಾಪ ಇನ್ನೂ ಪ್ರಭಾವಿಯಾಗಿದೆ ಎಂಬುದು ಸ್ಥಳೀಯರ ಬಲವಾದ ನಂಬಿಕೆ. ಈ ಪ್ರದೇಶದಲ್ಲಿ ಆಕೆಯ ಸ್ಮರಣಾರ್ಥ ದೇವಸ್ಥಾನವೊಂದನ್ನು ಸಹ ಕಟ್ಟಿಸಲಾಗಿದೆ.
ಸಾಬುದಾಗೆ ಆದ ಅನ್ಯಾಯಕ್ಕೆ ಪ್ರತಿಯಾಗಿ, ಪುರುಷರು ಮಹಿಳೆಯರ ಧಿರಿಸನಲ್ಲಿ ಬಂದು ಗರ್ಬಾ ನೃತ್ಯ ಮಾಡಿ ತಮ್ಮನ್ನು ಕ್ಷಮಿಸಲು ದೇವರಲ್ಲಿ ಕೇಳಿಕೊಳ್ಳುತ್ತಾರೆ.