ಆಧಾರ್ ಕಾರ್ಡ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಧಾರ್ ಕಾರ್ಡ್, ಸರ್ಕಾರಿ ಹಾಗೂ ಖಾಸಗಿಯ ಅನೇಕ ಸೇವೆಗೆ ಅನಿವಾರ್ಯವಾಗಿದೆ. ಇನ್ಮುಂದೆ, ಆಧಾರ್ ಕಾರ್ಡ್ ನಂತೆಯೇ ಹೆಲ್ತ್ ಮಿಷನ್ ಅಡಿಯಲ್ಲಿ, ಆರೋಗ್ಯ ಕಾರ್ಡ್ ಸಿಗಲಿದೆ. ಸರ್ಕಾರ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟ ಆರೋಗ್ಯ ಕಾರ್ಡ್ ನೀಡಲಿದೆ.
ಇದು ಸಂಪೂರ್ಣ ಡಿಜಿಟಲ್ ಕಾರ್ಡ್ ಆಗಿದ್ದು, ಆಧಾರ್ ಕಾರ್ಡ್‌ನಂತೆಯೇ ಇರಲಿದೆ. ಆಧಾರ್ ಕಾರ್ಡ್‌ನಂತೆ ಇದ್ರಲ್ಲೂ ಸಂಖ್ಯೆ ಇರಲಿದೆ. ರೋಗಿಯ ಆರೋಗ್ಯದ ಬಗ್ಗೆ ಇದ್ರಲ್ಲಿ ಸಂಪೂರ್ಣ ಮಾಹಿತಿ ಇರಲಿದೆ. ಈ ವಿಶಿಷ್ಟ ಕಾರ್ಡ್‌ನಿಂದ, ಯಾರಿಗೆ, ಎಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬುದು ತಿಳಿಯಲಿದೆ. ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಈ ವಿಶಿಷ್ಟ ಆರೋಗ್ಯ ಕಾರ್ಡ್‌ನಲ್ಲಿ ದಾಖಲಿಸಲಾಗುತ್ತದೆ.
ರೋಗಿ,ತನ್ನೊಂದಿಗೆ ಫೈಲ್ ಒಯ್ಯಬೇಕಾಗಿಲ್ಲ. ವೈದ್ಯರು ಅಥವಾ ಆಸ್ಪತ್ರೆ ಸಿಬ್ಬಂದಿ, ರೋಗಿಯ ಅನನ್ಯ ಆರೋಗ್ಯ ಐಡಿಯನ್ನು ನೋಡುವ ಮೂಲಕ ಆತನ ಸ್ಥಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ನಂತರ ಇದರ ಆಧಾರದ ಮೇಲೆ ಹೆಚ್ಚಿನ ಚಿಕಿತ್ಸೆಯನ್ನು ನೀಡಬಹುದು.
ಈ ಕಾರ್ಡ್‌ನಲ್ಲಿ ವ್ಯಕ್ತಿಯು ತನಗೆ ಲಭ್ಯವಿರುವ ಸರ್ಕಾರಿ ಯೋಜನೆಗಳ ಬಗ್ಗೆಯೂ ಮಾಹಿತಿ ಪಡೆಯಬಹುದು. ಆಯುಷ್ಮಾನ್ ಭಾರತ್ ಅಡಿಯಲ್ಲಿ ರೋಗಿಯು ಚಿಕಿತ್ಸಾ ಸೌಲಭ್ಯಗಳ ಪ್ರಯೋಜನವನ್ನು ಪಡೆಯುತ್ತಾನೋ ಇಲ್ಲವೋ ಎಂಬುದನ್ನು ಈ ಕಾರ್ಡ್ ಮೂಲಕ ತಿಳಿಯಬಹುದು.
ಆಧಾರ್ ಕಾರ್ಡ್‌ನಂತೆ, ವಿಶಿಷ್ಟ ಆರೋಗ್ಯ ಐಡಿಯ ಅಡಿಯಲ್ಲಿ, ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾಬೇಸ್ ಸಿದ್ಧಪಡಿಸುತ್ತದೆ. ಈ ಐಡಿಯೊಂದಿಗೆ, ಎಲ್ಲಾ ವಿವರಗಳನ್ನು ಆ ವ್ಯಕ್ತಿಯ ವೈದ್ಯಕೀಯ ದಾಖಲೆಯಲ್ಲಿ ಇರಿಸಲಾಗುವುದು. ಈ ಐಡಿ ಯ ಸಹಾಯದಿಂದ, ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ನೋಡಬಹುದು.
ವ್ಯಕ್ತಿಯ ಐಡಿಯನ್ನು ಜನರೇಟ್ ಮಾಡಲಾಗುತ್ತದೆ. ಆತನಿಂದ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಎರಡು ದಾಖಲೆಗಳ ಸಹಾಯದಿಂದ, ಒಂದು ಅನನ್ಯ ಆರೋಗ್ಯ ಕಾರ್ಡ್ ಸಿದ್ಧಪಡಿಸಲಾಗುತ್ತದೆ.
ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಇದನ್ನು ಸಿದ್ಧಪಡಿಸಲಾಗುವುದು. Https://healthid.ndhm.gov.in/register ನಲ್ಲಿ ದಾಖಲೆ ನೀಡುವ ಮೂಲಕವೂ ಐಡಿ ನಂಬರ್ ಪಡೆಯಬಹುದು.