
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೇರಿದಂತೆ ಅನೇಕ ಖಾತೆಗಳನ್ನು ಹೊಂದಿರುವ ಗೋಯಲ್ ಅವರು ಸಾಮಾಜಿಕ ಕಾರ್ಯಕರ್ತೆ ಸೀಮಾ ಗೋಯಲ್ ಅವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ತಮ್ಮ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಕೇಂದ್ರ ಸಚಿವರು, ಬುಧವಾರ ಟ್ವಿಟ್ಟರ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರ ಜೊತೆಗಿನ ಬಂಧಕ್ಕಾಗಿ ಪತ್ನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ 30ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಥ್ರೋಬ್ಯಾಕ್ ಚಿತ್ರಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಂದನ್ನು ಅವರ ಮದುವೆಯ ದಿನದಂದು ತೆಗೆದಿದ್ದರೆ, ಇನ್ನೊಂದು ಚಿತ್ರವು ಇಬ್ಬರು ಬೆಂಚಿನ ಮೇಲೆ ಕುಳಿತಿರುವುದನ್ನು ಹಂಚಿಕೊಂಡಿದ್ದಾರೆ.
ಗೋಯಲ್ ಅವರ ಟ್ವೀಟ್ ಅನ್ನು 60,000ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ತಮ್ಮ ಸಹೋದ್ಯೋಗಿ ಸಚಿವರುಗಳು ಕೂಡ ಕಮೆಂಟ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಕೂಡ 30 ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕೇಂದ್ರ ಸಚಿವ ಭೂಪೇಂದರ್, ಲೋಕಸಭಾ ಸಂಸದರಾದ ಪೂನಂಬೆನ್ , ಪ್ರಭು ವಾಸವ, ಡಾ ಕಿರಿತ್ ಸೋಲಂಕಿ ಮತ್ತು ವಿನೋದ್ ಚಾವ್ಡಾ, ಗುಜರಾತ್‌ನ ಬಿಜೆಪಿ ಸಂಸದರು ಸೇರಿದಂತೆ ಹಲವಾರು ಮಂದಿ ಟ್ವಿಟ್ಟರ್ ಖಾತೆಗಳಿಂದ ಕೇಂದ್ರ ಸಚಿವರಿಗೆ ಶುಭ ಹಾರೈಸಿದ್ದಾರೆ.