
ಮುಂಬೈ: ತಾಯಂದಿರ ದಿನದ ಮಾದರಿಯಲ್ಲಿ ‘ಪತ್ನಿಯರ ದಿನ’ವನ್ನು ಆಚರಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಭಾನುವಾರ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಠಾವಳೆ, ತಾಯಿ ಜನ್ಮ ನೀಡುತ್ತಾಳೆ. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಹೆಂಡತಿ ತನ್ನ ಪತಿಯೊಂದಿಗೆ ಇರುತ್ತಾಳೆ ಎಂದು ಹೇಳಿದರು.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ನಾವು ಪತ್ನಿಯರ ದಿನವನ್ನು ಆಚರಿಸಬೇಕು. ಅಂತರಾಷ್ಟ್ರೀಯ ತಾಯಂದಿರ ದಿನವನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಅದೇ ರೀತಿ ನಾವು ಪತ್ನಿಯರ ದಿನವನ್ನು ಆಚರಿಸಬೇಕು ಎಂದು ಅವರು ಹೇಳಿದ್ದಾರೆ.