ನವದೆಹಲಿ: ಕೇಂದ್ರ ಸರಕಾರದ ನೂತನ ಸಚಿವರು ಕೈಗೊಂಡಿರುವ 20 ಸಾವಿರ ಕಿ.ಮೀ. ಕ್ರಮಿಸುವ ಜನ ಆಶೀರ್ವಾದ ಯಾತ್ರೆಯ ಭಾಗವಾಗಿ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಒಡಿಶಾದಲ್ಲಿ ಜನಸಂಪರ್ಕದಲ್ಲಿ ನಿರತರಾಗಿದ್ದಾರೆ.
ರಾಯಗಾಡ ಜಿಲ್ಲೆಯ ಪಯಾಕುಟ್ ಗ್ರಾಮದಲ್ಲಿ ಹಾದುಹೋಗುತ್ತಿದ್ದಾಗ ಅವರು, ಸಾಂಪ್ರಾದಾಯಿಕ ದಿರಿಸಿನಲ್ಲಿದ್ದ ಕೆಲವು ಮಕ್ಕಳನ್ನು ರಸ್ತೆಯಲ್ಲಿ ಕಂಡು, ಸಂತಸಗೊಂಡಿದ್ದಾರೆ. ಕೂಡಲೇ ತಮ್ಮ ಕಾರಿನಿಂದ ಕೆಳಗಿಳಿದು ಮಕ್ಕಳೊಂದಿಗೆ ಮತ್ತು ಸ್ಥಳೀಯರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಇದರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
BREAKING NEWS: ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್
ಇನ್ನೊಂದೆಡೆ, ಭುವನೇಶ್ವರ್‍ನಿಂದ ರಾಯಗಾಡಕ್ಕೆ ತೆರಳುವ ರಾತ್ರಿ ಹೊತ್ತಿನ ರೈಲಿನಲ್ಲಿ ತಮ್ಮ ಬೋಗಿಯಿಂದ ಪಕ್ಕದ ಬೋಗಿಗೆ ತಾವಾಗಿಯೇ ತೆರಳಿ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದ್ದಾರೆ. ಸಚಿವರ ಸರಳ ಜೀವನಶೈಲಿಗೆ ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ. ರೈಲ್ವೆ ಸೇವೆಗಳು ಮತ್ತು ಬೋಗಿಗಳಲ್ಲಿನ ಸ್ವಚ್ಛತೆ ಸಂಬಂಧಿತ ಮಾಹಿತಿಗಳನ್ನು ಪ್ರಯಾಣಿಕರಿಂದ ಸಚಿವರು ಸಂಗ್ರಹಿಸಿರುವುದು ವಿಶೇಷ.
https://twitter.com/AshwiniVaishnaw/status/1428400291209121795?ref_src=twsrc%5Etfw%7Ctwcamp%5Etweetembed%7Ctwterm%5E1428400291209121795%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Funion-minister-ashwini-vaishnav-dances-with-villagers-in-odisha-2514996