ಉದಯಪುರದ ಭೀಕರ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.
ನಿನ್ನೆ ಉದಯಪುರದಲ್ಲಿ ನಡೆದ ಕ್ರೂರ ಹತ್ಯೆ ಬೆಚ್ಚಿಬೀಳಿಸುವಂತಿದ್ದು, ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸುವಂತೆ ಗೃಹ ಸಚಿವಾಲಯ ಆದೇಶಿಸಿದೆ. ಕೃತ್ಯದಲ್ಲಿ ಯಾವುದೇ ಸಂಘಟನೆ ಭಾಗಿ ಮತ್ತು ಅಂತರರಾಷ್ಟ್ರೀಯ ಲಿಂಕ್ ಗಳನ್ನು ಕೂಡ ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣವನ್ನು ಆರಂಭದಲ್ಲಿ ರಾಜ್ಯ ಪೊಲೀಸರು ಉದಯಪುರದಲ್ಲಿ ದಾಖಲಿಸಿದ್ದರು. ನಂತರ ಎನ್ಐಎ ಇಂದು ಪ್ರಕರಣವನ್ನು ಮರು ದಾಖಲಿಸಿದೆ.
ಎನ್ಐಎ ತಂಡಗಳು ಈಗಾಗಲೇ ಉದಯಪುರ ತಲುಪಿದ್ದು, ಪ್ರಕರಣದ ತ್ವರಿತ ತನಿಖೆಗೆ ಅಗತ್ಯ ಕ್ರಮ ಆರಂಭಿಸಲಾಗಿದೆ.