alex Certify ಮುಂದಿನ 5 ವರ್ಷದಲ್ಲಿ ತಲಾ ಆದಾಯ ದ್ವಿಗುಣ: ನಿರ್ಮಲಾ ಸೀತಾರಾಮನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ 5 ವರ್ಷದಲ್ಲಿ ತಲಾ ಆದಾಯ ದ್ವಿಗುಣ: ನಿರ್ಮಲಾ ಸೀತಾರಾಮನ್

ನವದೆಹಲಿ: ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ತಲಾ ಆದಾಯ ದ್ವಿಗುಣವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಳೆದ 10 ವರ್ಷಗಳಿಂದ ಸರ್ಕಾರ ಕೈಗೊಂಡ ರಚನಾತ್ಮಕ ಸುಧಾರಣೆಗಳ ಫಲಿತಾಂಶ ಇದಾಗಿದೆ ಎಂದು ಅವರು ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ತಲಾ ಆದಾಯ ದ್ವಿಗುಣವಾಗುತ್ತದೆ. ಮುಂಬರುವ ದಶಕಗಳಲ್ಲಿ ಸಾಮಾನ್ಯ ಜನರ ಜೀವನಮಟ್ಟ ತೀವ್ರ ಏರಿಕೆ ಕಾಣಲಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಆರ್ಥಿಕ ಬೆಳವಣಿಗೆ ಸಾಧನೆಯಿಂದ ಕೇವಲ 5 ವರ್ಷಗಳ ಅವಧಿಯಲ್ಲಿ ಭಾರತ 10ನೇ ಸ್ಥಾನದಿಂದ ಮೇಲಕ್ಕೇರಿ ಐದನೇ ಸ್ಥಾನಕ್ಕೆ ಬಂದಿದೆ. ತಲಾ ಆದಾಯ 2730 ಡಾಲರ್ ಗೆ ಬರಲು ನಮಗೆ 75 ವರ್ಷಗಳೇ ಬೇಕಾಯಿತು. ಆದರೆ, ಐಎಂಎಫ್ ಪ್ರಕಾರ ಈ ಮೊತ್ತಕ್ಕೆ ಇನ್ನೂ 2000 ಸೇರಲು ಕೇವಲ 5 ವರ್ಷ ಸಾಕಾಗುತ್ತದೆ. ಮುಂಬರುವ ದಶಕಗಳಲ್ಲಿ ಸಾಮಾನ್ಯ ಜನರ ಜೀವನ ಮಟ್ಟದಲ್ಲಿ ತೀವ್ರ ಏರಿಕೆ ಕಾಣುತ್ತದೆ ಎಂದು ತಿಳಿಸಿದ್ದಾರೆ.

2047ರ ವೇಳೆಗೆ ಭಾರತ ಸ್ವಾತಂತ್ರ್ಯ ಗಳಿಸಿ ಒಂದು ಶತಮಾನವಾಗುತ್ತದೆ. ಆಗ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಪ್ರಮುಖ ಗುಣಲಕ್ಷಣ ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...