ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಸಂಪುಟ ಸಭೆ ನಡೆಯುತ್ತಿದೆ, ಈ ಸಭೆಯು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವುದು ಒಂದು ಕಡೆಯಾದರೆ, ಬರೋಬ್ಬರಿ ಒಂದು ವರ್ಷದ ಬಳಿಕ ಸಂಪುಟ ಸಭೆ ಭೌತಿಕವಾಗಿ ನಡೆಯುತ್ತಿದೆ ಎಂಬುದು ವಿಶೇಷ ಸಂಗತಿ.
ಕೋವಿಡ್ ಸಾಂಕ್ರಾಮಿಕದ ಕಾರಣಕ್ಕಾಗಿ ಕೇಂದ್ರ ಸಂಪುಟ ಸಭೆಯು ಕೂಡ ವರ್ಚುಯಲ್ ರೂಪದಲ್ಲಿ ಕಳೆದೊಂದು ವರ್ಷದಿಂದ ನಡೆದಿದೆ. ಸಚಿವರೆಲ್ಲರೂ ತಾವು ಇದ್ದಲ್ಲಿಂದಲೇ ಆನ್ ಲೈನ್ ಮೂಲಕ ಸಭೆಯಲ್ಲಿ ಹಾಜರಿದ್ದು, ಪ್ರತಿನಿಧಿಸುತ್ತಿದ್ದರು. ಇದೀಗ ದೇಶಾದ್ಯಂತ ಸಾಂಕ್ರಾಮಿಕ ಇರುವ ಪರಿಣಾಮ ಸಂಪುಟ ಸಭೆಯನ್ನು ಭೌತಿಕವಾಗಿ ನಡೆಸಲಾಗುತ್ತಿದೆ.
ಹುಡುಗನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು…!
ಕಳೆದ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಕೊರೋನ ವೈರಸ್ ಸಾಂಕ್ರಾಮಿವು ದೇಶವನ್ನು ಮುತ್ತಿದಾಗ ದೈಹಿಕವಾಗಿ ಸಭೆ ನಡೆಸುವುದು ಕೈಬಿಡಲಾಗಿತ್ತು. ಆದಾಗ್ಯೂ, ಪ್ರತಿ ವಾರವೂ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿಯಮಿತವಾಗಿ ಸಭೆ ನಡೆಸಲಾಗುತ್ತಿದೆ.
ಬುಧವಾರ ಸಂಜೆ ನಾಲ್ಕು ಗಂಟೆಗೆ ಪ್ರಧಾನಿಯವರು ಕೌನ್ಸಿಲ್ ಆಫ್ ಮಿನಿಸ್ಟರ್ ಸಭೆಯನ್ನೂ ಸಹ ಕರೆದಿದ್ದಾರೆ. ಜುಲೈ 7ರಂದು ಸಂಪುಟ ವಿಸ್ತರಣೆಯ ನಂತರ 43 ಹೊಸ ಮಂತ್ರಿಗಳನ್ನು ಸೇರ್ಪಡೆಗೊಳಿಸುವುದರೊಂದಿಗೆ ಒಂದು ವಾರದಲ್ಲಿ ಇದು ಎರಡನೇ ಬಾರಿಗೆ ಸಚಿವರ ಪರಿಷತ್ತಿನ ಸಭೆ ಸೇರಿದಂತಾಗುತ್ತಿದೆ.
ಸಂಸತ್ತಿನ ಮುಂಗಾರು ಅಧಿವೇಶನವು ಮುಂದಿನ ವಾರ ಆರಂಭವಾಗುವ ಕಾರಣ ಸಚಿವರ ಸಭೆಯನ್ನು ಆಗಾಗ್ಗೆ ಕರೆಯಲು ಒಂದು ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.