ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಆಹಾರ, ರಸಗೊಬ್ಬರ, ಇಂಧನಗಳ ಮೇಲಿನ ಸಬ್ಸಿಡಿಯನ್ನು 7.8ರಷ್ಟು ಕಡಿತಗೊಳಿಸಲಾಗಿದೆ.
ಸಬ್ಸಿಡಿಗಳ ಹಂಚಿಕೆಗಾಗಿ ಈ ಬಾರಿ ಬಜೆಟ್ ನಲ್ಲಿ 3.81 ಲಕ್ಷ ಕೋಟಿ ರೂ. ಹಣ ಹಂಚಿಕೆ ಮಾಡಲಾಗಿದೆ. ಇದು ಕಳೆದ ಬಾರಿಗಿಂತ ಕಡಿಮೆಯಾಗಿದೆ. ಕಳೆದ ಬಾರಿ 4.13 ಲಕ್ಷ ಕೋಟಿ ರೂ. ನೀಡಲಾಗಿತ್ತು.
ಆಹಾರ ಸಬ್ಸಿಡಿ ಹಂಚಿಕೆಯಲ್ಲಿ ಕಡಿಮೆಯಾಗಿದೆ. 2.05 ಲಕ್ಷ ಕೋಟಿ ರೂ. ನೀಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 2.12 ಲಕ್ಷ ಕೋಟಿ ರೂ ನೀಡಲಾಗಿತ್ತು.
ರಸಗೊಬ್ಬರ ಸಬ್ಸಿಡಿಯಲ್ಲಿ ಅತಿ ಹೆಚ್ಚು ಕಡೆಮೆ ಮಾಡಲಾಗಿದೆ. 2023 -24ನೇ ಸಾಲಿನಲ್ಲಿ 1.88 ಲಕ್ಷ ಕೋಟಿ ರೂ.ನಷ್ಟಿದ್ದ ಆಹಾರ ಸಬ್ಸಿಡಿ 1.64 ಲಕ್ಷ ಕೋಟಿ ರೂ.ಗೆ. ಕಡಿತವಾಗಿದೆ.
ಪೆಟ್ರೋಲಿಯಂ ಸಬ್ಸಿಡಿಗಳು ಮುಖ್ಯವಾಗಿ ಅಡುಗೆ ಸಿಲಿಂಡರ್ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದೆ. 2023-24ನೇ ಸಾಲಿನಲ್ಲಿ 12.24 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈ ಬಾರಿ ಸಬ್ಸಿಡಿ ಕಡಿತವಾಗಿ 11.9 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.