ನವದೆಹಲಿ: ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಲಯದ ಸುಧಾರಣೆಗೆ ಮುಂದಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಸಿದ್ಧತೆ ನಡೆಸಿದೆ.
ಜುಲೈ 22 ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಬ್ಯಾಂಕಿಂಗ್ ವಲಯದ ಸುಧಾರಣೆಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ಕ್ಕೆ ತಿದ್ದುಪಡಿ ಸಂಬಂಧ ಕೇಂದ್ರ ಸರ್ಕಾರ ಮಸೂದೆ ಮಂಡಿಸುವ ಸಾಧ್ಯತೆ ಇದೆ.
ಬ್ಯಾಂಕಿಂಗ್ ಕಂಪನಿಗಳ ಕಾಯ್ದೆ 1970, 1980ರ ಕಾಯ್ದೆಯ(ಸ್ವಾಧೀನ ಮತ್ತು ವರ್ಗಾವಣೆ) ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಈ ಎರಡು ಕಾಯ್ದೆಗಳ ಅಡಿಯಲ್ಲಿ ಬ್ಯಾಂಕುಗಳನ್ನು ಎರಡು ಹಂತದಲ್ಲಿ ರಾಷ್ಟ್ರೀಕರಣಗೊಳಿಸಲಾಗಿತ್ತು.
ಬ್ಯಾಂಕುಗಳ ಖಾಸಗೀಕರಣಕ್ಕಾಗಿ ಈ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕಿದೆ. ಸಂಸತ್ತು ಈ ತಿದ್ದುಪಡಿಗೆ ಅನುಮೋದನೆ ನೀಡಿದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ತನ್ನ ಹೂಡಿಕೆಯನ್ನು ಸರ್ಕಾರ ಶೇಕಡ 51ಕ್ಕಿಂತ ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ಬ್ಯಾಂಕುಗಳ ಆಡಳಿತ ಸುಧಾರಣೆಯ ಜೊತೆಗೆ ಹೂಡಿಕೆದಾರರ ರಕ್ಷಣೆ ಹೆಚ್ಚಿಸಬಹುದು ಎನ್ನಲಾಗಿದೆ.
ತಿದ್ದುಪಡಿ ಮಾಡಬಹುದಾದ ಬ್ಯಾಂಕ್ ಕಾನೂನುಗಳು ಯಾವುವು?
ಬ್ಯಾಂಕಿಂಗ್ ಕಂಪನಿಗಳ(ಅಂಡರ್ಟೇಕಿಂಗ್ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ, 1970 ಮತ್ತು ಬ್ಯಾಂಕಿಂಗ್ ಕಂಪನಿಗಳ (ಅಂಡರ್ಟೇಕಿಂಗ್ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ, 1980 ರಂತಹ ಇತರ ಕಾಯಿದೆಗಳಲ್ಲಿನ ತಿದ್ದುಪಡಿಗಳು ಸಹ ಸಂಭವಿಸಬಹುದು ಏಕೆಂದರೆ ಖಾಸಗೀಕರಣವನ್ನು ಹೆಚ್ಚಿಸಲು ತಿದ್ದುಪಡಿಗಳು ಬೇಕಾಗುತ್ತವೆ. ಹಿಂದೆ ರಾಷ್ಟ್ರೀಕರಣಕ್ಕೆ ಕಾರಣವಾದ ಕಾನೂನುಗಳು.