ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020ರಲ್ಲಿ ಎರಡನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು. ಭಾರತದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ವಿತ್ತೀಯ ಶಿಸ್ತು ಕಾಪಾಡಿಕೊಳ್ಳಲು ಆ ವೇಳೆ ಗಮನ ಕೇಂದ್ರೀಕರಿಸಲಾಗಿತ್ತು.
ಸೀತಾರಾಮನ್ ಜುಲೈ 2019 ರಲ್ಲಿ ತಮ್ಮ ಚೊಚ್ಚಲ ಬಜೆಟ್ ಭಾಷಣದ ತಮ್ಮದೇ ಆದ ದಾಖಲೆಯನ್ನು ಆ ವೇಳೆ ಮುರಿದರು. ಸರಿಸುಮಾರು 160 ನಿಮಿಷಗಳ ಕಾಲ ನಡೆದ ಅವರ 2020-21ರ ಬಜೆಟ್ ಭಾಷಣವನ್ನು ಭಾರತದ ಇತಿಹಾಸದಲ್ಲಿ ಹಣಕಾಸು ಸಚಿವರೊಬ್ಬರಿಂದ ಮಂಡನೆಯಾದ ಸುದೀರ್ಘ ಬಜೆಟ್ ಭಾಷಣವೆಂದು ಪರಿಗಣಿಸಲಾಗಿದೆ.
ಒಂದೇ ಮೊಬೈಲ್ ಸಂಖ್ಯೆಯಲ್ಲಿ ಇಡೀ ಕುಟುಂಬಕ್ಕೆ ʼಆಧಾರ್ʼ ಪಿವಿಸಿ ಪಡೆಯಲು ಇಲ್ಲಿದೆ ಟಿಪ್ಸ್
ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದ ಕೇವಲ ಎರಡು ಪುಟಗಳನ್ನು ಓದದೇ ಬಿಟ್ಟಿದ್ದರು. ಆ ವೇಳೆ ಅವರಲ್ಲಿ ಒಂದು ರೀತಿಯ ಅಸ್ವಸ್ಥತೆ ಕಂಡು ಅವರ ಹಣೆಯಿಂದ ಬೆವರು ಹರಿಯುತ್ತಿರುವುದು ಕಂಡುಬಂದಿತು. ಈ ವೇಳೆ ಸೀತಾರಾಮನ್ಗೆ ಅವರ ಸಚಿವ ಸಹೋದ್ಯೋಗಿಗಳು ಮಿಠಾಯಿಗಳನ್ನು ಕೊಡಲು ಮುಂದಾಗಿದ್ದರು. ಆದರೆ ಅದು ಸಹಾಯ ಮಾಡದ ಕಾರಣ, ಸ್ಪೀಕರ್ ಓಂ ಬಿರ್ಲಾ ಅವರಿಗೆ ತಮ್ಮ ಭಾಷಣದ ಉಳಿದ ಭಾಗವನ್ನು ಓದಿದಂತೆ ಪರಿಗಣಿಸುವಂತೆ ಕೋರಿ ಸೀತಾರಾಮನ್ ಭಾಷಣವನ್ನು ನಿಲ್ಲಿಸಲು ನಿರ್ಧರಿಸಿದರು.
2019 ರಲ್ಲಿ ಹಣಕಾಸು ಸಚಿವರಾದ ನಂತರ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸುವಾಗ, ಸೀತಾರಾಮನ್ 2 ಗಂಟೆ 17 ನಿಮಿಷಗಳ ಕಾಲ ಭಾಷಣ ಮಾಡಿದರು. ಈ ಮೂಲಕ ಜಸ್ವಂತ್ ಸಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದ್ದರು. 2003ರಲ್ಲಿ, ಅಂದಿನ ವಿತ್ತೀಯ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರು 133 ನಿಮಿಷಗಳ ಕಾಲ ತಮ್ಮ ಬಜೆಟ್ ಭಾಷಣವನ್ನು ಮಂಡಿಸಿದ್ದರು.