alex Certify ಕೇಂದ್ರ ಬಜೆಟ್: ಕೃಷಿ ಕ್ಷೇತ್ರ ಸುಧಾರಿಸಲು ಮಹತ್ವದ ಘೋಷಣೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಬಜೆಟ್: ಕೃಷಿ ಕ್ಷೇತ್ರ ಸುಧಾರಿಸಲು ಮಹತ್ವದ ಘೋಷಣೆ ಸಾಧ್ಯತೆ

2021-22ರಲ್ಲಿ ಭಾರತದ ಆರ್ಥಿಕತೆಯು 9% ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಸಂರ್ಭದಲ್ಲೇ ಈ ಆರ್ಥಿಕ ವರ್ಷದ ಕೇಂದ್ರದ ಬಜೆಟ್ ಸಮಯ ಹತ್ತಿರವಾಗುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೇಗ ಬೆಳವಣಿಗೆಯನ್ನ ಗುರಿಯಾಗಿಸಿಕೊಂಡು, ಬಜೆಟ್ ಘೋಷಿಸುವ ಸಾಧ್ಯತೆ ಇದೆ.

2021 ರ ಬಜೆಟ್ ಭಾಷಣದಲ್ಲಿ ಸೀತಾರಾಮನ್ ಪ್ರತಿಪಾದಿಸಿದಂತೆ ಕೃಷಿ ಕಾನೂನುಗಳು, ಕೃಷಿ ಕ್ಷೇತ್ರದ ಬೆಳವಣಿಗೆಗೆ ಬೆನ್ನೆಲುಬಾಗಿರಬೇಕಾಗಿತ್ತು. ಆದರೆ ಈಗ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದರಿಂದ, ಭಾರತದಾದ್ಯಂತ ಕೃಷಿ ಕ್ಷೇತ್ರವನ್ನು ಸುಧಾರಿಸಲು ಸರ್ಕಾರವು ಹೊಸ ಯೋಜನೆಗಳನ್ನು ಪ್ರಸ್ತುತಪಡಿಸುವ ಸಾಧ್ಯತೆಯಿದೆ.

ರಾಷ್ಟ್ರೀಯ ಕಿಸಾನ್ ವಿಕಾಸ್ ಯೋಜನೆ (RKVY)ಯನ್ನು ಬೂಸ್ಟ್ ಮಾಡಲಿದೆಯ ಕೇಂದ್ರ…?

ಧಾನ್ಯಗಳು ಮತ್ತು ಎಣ್ಣೆಬೀಜ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಕಿಸಾನ್ ವಿಕಾಸ್ ಯೋಜನೆ (RKVY) ಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಕೃಷಿ ಹಣಕಾಸು ಗುರಿಯನ್ನು 18 ಲಕ್ಷ ಕೋಟಿ ರೂ.ಗೆ ಹೆಚ್ಚಿಸಬಹುದು ಅಗ್ರಿ ಕ್ರೆಡಿಟ್ ಉದ್ದೇಶವನ್ನು ರೂ. 16.5 ಶತಕೋಟಿಯಿಂದ ರೂ. 18 ಬಿಲಿಯನ್‌ಗೆ ಹೆಚ್ಚಿಸಬಹುದು.

ಇದರಿಂದ ರೈತರು ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ಪಡೆಯುವ ಹಳೆ ಪದ್ಧತಿಗಳಿಂದ ದೂರವಾಗಿ, ಹೊಸ ರೀತಿಗೆ ಒಗ್ಗಿಕೊಳ್ಳಲು ಸುಲಭವಾಗುತ್ತದೆ ಎಂಬ ಲೆಕ್ಕಾಚಾರವಿದೆ. ಸಾಮಾನ್ಯವಾಗಿ, ಕೃಷಿ ಸಾಲಗಳು 9% ಬಡ್ಡಿದರವನ್ನು ಹೊಂದಿರುತ್ತವೆ. ಮತ್ತೊಂದೆಡೆ, ಸರ್ಕಾರವು ಅಲ್ಪಾವಧಿಯ ಬೆಳೆ ಸಾಲಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು, ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯಧನವನ್ನು ನೀಡುತ್ತಿದೆ. ಮುಂದಿನ ಬಜೆಟ್‌ನಲ್ಲೂ ಇದನ್ನು ಮುಂದುವರಿಸುವ ನಿರೀಕ್ಷೆ ಇದೆ.

ಬೆಳೆ ವೈವಿಧ್ಯೀಕರಣಕ್ಕೆ ಆದ್ಯತೆ ನೀಡಲಾಗುವುದು..?

ಸೆಪ್ಟೆಂಬರ್ 2021 ರ ರಾಷ್ಟ್ರೀಯ ಅಂಕಿಅಂಶ ಕಚೇರಿಯ ಅಧ್ಯಯನದ ಪ್ರಕಾರ ಬಿಹಾರದ ರೈತರು ಪ್ರತಿ ಹೆಕ್ಟೇರ್ ಗೆ ಹರಿಯಾಣದ ರೈತರಿಗಿಂತ ಹೆಚ್ಚು ಗಳಿಸಿದ್ದಾರೆ. ಪಂಜಾಬಿ ರೈತರು ರಾಷ್ಟ್ರೀಯ ಸರಾಸರಿಗಿಂತ ಗಮನಾರ್ಹವಾಗಿ ಕಡಿಮೆ ಹಣವನ್ನು ಗಳಿಸುತ್ತಿದ್ದಾರೆ.

ಅಕ್ಕಿ-ಗೋಧಿಗೆ ಅಂಟಿಕೊಳ್ಳುವುದು ಊಹಿಸಬಹುದಾದ ಫಲಿತಾಂಶಗಳನ್ನು ನೀಡಬಹುದಾದರೂ, ಕ್ಷೀಣಿಸುತ್ತಿರುವ ನೀರಿನ ಸರಬರಾಜು ಮತ್ತು ಮಣ್ಣಿನ ಗುಣಮಟ್ಟ ಕಡಿಮೆಯಾಗುವುದರಿಂದ ದೇಶದ ಅನೇಕ ಭಾಗಗಳಲ್ಲಿ ಕೃಷಿಯು ಹೆಚ್ಚು ದುಬಾರಿಯಾಗುತ್ತಿದೆ. ತಜ್ಞರು ಇದಕ್ಕೆ ಬೆಳೆ ವೈವಿಧ್ಯತೆಯೊಂದೇ ಪರಿಹಾರ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಭಾರತದಾದ್ಯಂತ ಬೆಳೆ ವೈವಿಧ್ಯತೆಯನ್ನು ಉತ್ತೇಜಿಸಲು ಸರ್ಕಾರವು ಹೆಚ್ಚಿನ ಸಹಾಯಧನಗಳನ್ನು ಪರಿಚಯಿಸುವ ಸಾಧ್ಯತೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...