ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆಡಳಿತ ಮಂಡಳಿ ಸಿಬಿಐಗೆ ದೂರು ನೀಡಿದೆ.
ಪ್ರಕರಣ ಸಂಬಂಧಪಟ್ಟ ಬ್ಯಾಂಕಿನ ಮೂರು ಶಾಖೆಗಳ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ವಾಲ್ಮೀಕಿ ನಿಗಮದ ಖಾತೆಗಳಲ್ಲಿ ಹಣದ ಅಕ್ರಮ ವರ್ಗಾವಣೆ ಬಗ್ಗೆ ಬ್ಯಾಂಕಿಗೆ ಮಾಹಿತಿಯಿದ್ದು, ಈ ಹಗರಣ ಬೆಳಕಿಗೆ ಬಂದ ತಕ್ಷಣವೇ ಹಣಕಾಸು ಬಹಿವಾಟುಗಳನ್ನು ಅಕ್ರಮ ಎಂದು ಘೋಷಿಸಲಾಗಿದೆ.
ಪ್ರಕರಣದ ಸಮಗ್ರ ತನಿಖೆಗೆ ಮತ್ತು ಅಕ್ರಮದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗಾಗಿ ಸಿಬಿಐಗೆ ದೂರು ನೀಡಲಾಗಿದೆ. ಗ್ರಾಹಕರ ಹಿತರಕ್ಷಣೆ ಬ್ಯಾಂಕಿನ ಮೊದಲ ಆದ್ಯತೆಯಾಗಿದೆ. ಪಾರದರ್ಶಕತೆ ಎತ್ತಿ ಹಿಡಿಯಲು ಬ್ಯಾಂಕ್ ಬದ್ಧವಾಗಿದೆ. ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣದ ನ್ಯಾಯಯುತ, ಶೀಘ್ರ ತನಿಖೆಗಾಗಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.