ಮದುವೆ ಮನೆಗೆ ಊಟಕ್ಕೆಂದೇ ಬಂದು, ಭರ್ಜರಿ ಊಟ ಮಾಡಿ ನಂತ್ರ ಅತಿ ಕಡಿಮೆ ಹಣವನ್ನು ಉಡುಗೊರೆಯಾಗಿ ನೀಡಿ ಹೋಗುವ ಅತಿಥಿಯೊಬ್ಬರನ್ನು ಅಣಕಿಸುವ ವಿಡಿಯೋ ಒಂದು ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನ ರೋಹಿತ್ ಸಿಂಗ್ ಚೌಹಾಣ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೊದಲು ಮದುವೆ ಮನೆಗೆ ಬರ್ತಾರೆ. ನೇರವಾಗಿ ಊಟದ ಕೌಂಟರ್ ಗೆ ಹೋಗುವ ಆತ ಬಗೆ ಬಗೆ ಊಟವನ್ನು ತಿನ್ನುತ್ತಾನೆ. ಊಟ ಮಾಡುವಾಗ ಆತ ಯಾವ ತಿಂಡಿಗೆ ಎಷ್ಟು ರೂಪಾಯಿ ಎಂದು ಹೇಳೋದನ್ನು ಕೇಳಬಹುದು. ವಿವಿಧ ಭಕ್ಷ್ಯಗಳ ಪ್ಲೇಟ್ 300 ರೂಪಾಯಿ ಮಂಚೂರಿಗೆ 50 ರೂ., ಗುಲಾಬ್ ಜಾಮೂನ್ 20 ರೂ. ಮತ್ತು ಇತರ ಆಹಾರದ ಬೆಲೆ ಒಟ್ಟು 100 ರೂಪಾಯಿ. ಎಲ್ಲ ಸೇರಿ ಆತ 470 ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿರುತ್ತಾನೆ.
ನಂತ್ರ ಒಂದು ಕವರ್ ತೆಗೆದು ಅದಕ್ಕೆ 10 ರೂಪಾಯಿ ಹಾಕುವ ವ್ಯಕ್ತಿ, ಅದನ್ನು ವೇದಿಕೆ ಮೇಲಿರುವ ವಧುವಿಗೆ ನೀಡಿ ಬರ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅನೇಕರು ಅತಿಥಿಗಳು ಮಾಡುವ ಊಟ ಹಾಗೂ ಅವರು ನೀಡುವ ಉಡುಗೊರೆ ಬೆಲೆ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಕಮೆಂಟ್ ಮಾಡಿದ್ದಾರೆ.