ಟ್ವಿಟ್ಟರ್, ಇನ್ಸ್ಟಾಗ್ರಾಂ, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಕಬ್ಬು ತುಂಬಿದ ಟ್ರ್ಯಾಕ್ಟರ್ ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿರುವ ವಿಡಿಯೋ ವೈರಲ್ ಆಗಿದೆ. ಅಪಘಾತದ ದೃಶ್ಯದಲ್ಲಿ ನಗು ತರುವಂಥದ್ದೇನಿದೆ ಅಂತಾ ಪ್ರಶ್ನೆ ಮೂಡಿದ್ಯಾ..? ಹಾಗಿದ್ರೆ ಈ ಸ್ಟೋರಿಯನ್ನು ಪೂರ್ತಿಯಾಗಿ ಓದಿ..
ಕಬ್ಬು ತುಂಬಿದ ಟ್ರ್ಯಾಕ್ಟರ್ ವೊಂದು ರಸ್ತೆಯಲ್ಲಿ ಸಂಚರಿಸಿದೆ. ಟ್ರ್ಯಾಕ್ಟರ್ ವೊಂದರ ಹಿಂದುಗಡೆ ಕಬ್ಬು ನೇತಾಡುತ್ತಿತ್ತು. ಇದನ್ನು ಗಮನಿಸಿದ ಅಲ್ಲಿದ್ದ ಜನರು ಬೇರೆ ಅಪಘಾತವಾಗದಂತೆ ತಡೆಯುವುದಕ್ಕಾಗಿ ಟ್ರ್ಯಾಕ್ಟರ್ ಹಿಂದೆ ಓಡಿದ್ದಾರೆ. ಟ್ರ್ಯಾಕ್ಟರ್ ಅನ್ನು ನಿಲ್ಲಿಸಲು ಪ್ರಯತ್ನಪಟ್ಟಿದ್ದಾರೆ.
ಆದರೆ, ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಚಾಲಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಹಾಗಂತ ಲೈಟ್ ಕಂಬವೇನು ಬಿದ್ದಿಲ್ಲ. ಬದಲಾಗಿ ವಿದ್ಯುತ್ ಕಂಬದಲ್ಲಿ ಒಂದು ಲೈಟ್ ಅಷ್ಟೇ ಉರಿಯುತ್ತಿತ್ತು. ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ಯನಿರ್ವಹಿಸದೆ ಆಫ್ ಆಗಿದ್ದ ಇನ್ನೊಂದು ಲೈಟ್ ಕೂಡ ಉರಿದಿದೆ.
ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಘಟನೆಯ ನಂತರ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಬಳಕೆದಾರರು ಸ್ಪಷ್ಟಪಡಿಸಿದ್ದಾರೆ. ಆದರೆ, ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ಯನಿರ್ವಹಿಸದೇ ಇದ್ದ ಬಲ್ಬ್ ಮಾತ್ರ ಆನ್ ಆಗಿದೆ ಎಂದು ನಗುವ ಎಮೋಜಿಯೊಂದಿಗೆ ಬರೆದಿದ್ದಾರೆ. ಸದ್ಯ ಈ ವಿಡಿಯೋವನ್ನು 54,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
https://twitter.com/DRGulati80/status/1459109033860866082?ref_src=twsrc%5Etfw%7Ctwcamp%5Etweetembed%7Ctwterm%5E1459109033860866082%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Funhooked-trolley-rolls-back-on-street-with-people-chasing-it-crashes-onto-electrical-pole-and-turns-light-on%2F832050