alex Certify ಜೋ ಬೈಡೆನ್‌ ರನ್ನೂ ಹೊಗಳಿದ್ದೆ ಹಾಗಂತ ಅವರ ಪಾರ್ಟಿ ಸೇರಲು ಸಾಧ್ಯವೇ…? ಹಾರ್ದಿಕ್‌ ಪಟೇಲ್‌ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋ ಬೈಡೆನ್‌ ರನ್ನೂ ಹೊಗಳಿದ್ದೆ ಹಾಗಂತ ಅವರ ಪಾರ್ಟಿ ಸೇರಲು ಸಾಧ್ಯವೇ…? ಹಾರ್ದಿಕ್‌ ಪಟೇಲ್‌ ಪ್ರಶ್ನೆ

ತಾವು ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯನ್ನು ಸೇರುತ್ತಿರುವ ವದಂತಿಗಳನ್ನು ತಳ್ಳಿ ಹಾಕಿರುವ ಗುಜರಾತ್ ನ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್, ತಮಗೆ ಪಕ್ಷದ ರಾಜ್ಯ ಘಟಕದ ಬಗ್ಗೆ ಅಸಮಾಧಾನವಿದೆ ಎಂದು ಹೇಳಿದ್ದಾರೆ.

ಯುಎಸ್ ಚುನಾವಣೆಯಲ್ಲಿ ಜಾಯ್ ಬೈಡನ್ ಗೆಲುವು ಸಾಧಿಸಿ ಭಾರತೀಯ ಮೂಲದವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ನಾನು ಅಭಿನಂದಿಸಿದ್ದೆ. ಹಾಗೆಂದ ಮಾತ್ರಕ್ಕೆ ನಾನು ಬೈಡನ್ ಪಾರ್ಟಿಯನ್ನು ಸೇರಲು ಸಾಧ್ಯವೇ ? ಎಂದು ಪಟೇಲ್ ವದಂತಿಗಳಿಗೆ ಮಾರುತ್ತರ ನೀಡಿದ್ದಾರೆ.

ಸರ್ಕಾರ ನಡೀತಿರೋದೇ ನಮ್ಮಿಂದ; ಗ್ರಾಮ ಪಂಚಾಯತ್ ಸದಸ್ಯರು ಲೋಫರ್ಸ್; ಪ್ರೊಬೇಷನರಿ ಪಿಎಸ್ಐ ವಾಗ್ದಾಳಿ

ಪಟೇಲ್ ಗುಜರಾತ್ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರಾಗಿದ್ದು, ಬಿಜೆಪಿಯನ್ನು ಹೊಗಳಿದ್ದು, ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಈ ನಡವಳಿಕೆಯನ್ನು ಗಮನಿಸಿದರೆ ಡಿಸೆಂಬರ್ ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಾಳಯ ಸೇರಲಿದ್ದಾರೆ ಎಂಬ ವದಂತಿಗಳು ಹರಡಿದ್ದವು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಟೇಲ್, ಒಂದು ರಾಜಕೀಯ ಪಕ್ಷದಲ್ಲಿ ಉತ್ತಮ ಗುಣಮಟ್ಟ ಮತ್ತು ಸ್ಪಷ್ಟ ನಿರ್ಧಾರಗಳು ಇರಬೇಕಾಗುತ್ತದೆ. ಒಂದು ವೇಳೆ ಸಮಯವನ್ನು ವ್ಯರ್ಥ ಮಾಡುತ್ತಾ ಹೋದರೆ ಜನರು ನಿಮ್ಮಿಂದ ದೂರವಾಗುತ್ತಾರೆ ಎಂದು ತಮ್ಮ ಪಕ್ಷದ ನಾಯಕತ್ವದ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...