ಇದೊಂದು ಅನಿರೀಕ್ಷಿತ ಪುನರ್ಮಿಲನ. ತನ್ನ ದೇಹದ ಭಾಗವನ್ನು 16 ವರ್ಷಗಳ ನಂತರ ಭೇಟಿಯಾದ ಸುಮಧುರ ಘಳಿಗೆ. ಆ ಕ್ಷಣ ಕಂಡ ಮಹಿಳೆಯೊಬ್ಬಳು ಆನಂದಭಾಷ್ಪದಲ್ಲಿ ತೇಲಾಡಿದ್ಲು.
ಹೌದು, ಜೆನ್ನಿಫರ್ ಸುಟ್ಟನ್ ಎಂಬ ಮಹಿಳೆಯು ತಮ್ಮ ಹೃದಯವನ್ನು ವಸ್ತುಸಂಗ್ರಹಾಲಯದಲ್ಲಿ ಕಂಡಾಗ ಮೂಕವಿಸ್ಮಿತರಾದ್ರು. ತಮ್ಮ ಹೃದಯವನ್ನು ತೆಗೆದ 16 ವರ್ಷಗಳ ನಂತರ ಲಂಡನ್‌ನ ಪ್ರತಿಷ್ಠಿತ ಹಂಟೇರಿಯನ್ ಮ್ಯೂಸಿಯಂನಲ್ಲಿ ಅದನ್ನು ನೋಡಿದ್ರು.
ಈ ಬಗ್ಗೆ ಮಾತನಾಡಿದ ಜೆನ್ನಿಫರ್ ಇದನ್ನು ಅತಿವಾಸ್ತವಿಕ ಎಂದು ವಿವರಿಸಿದರು. ಜೀವ ಉಳಿಸುವ ಸಲುವಾಗಿ ಅಂಗಾಂಗ ದಾನವನ್ನು ಪರಿಗಣಿಸಲು ಇದು ಇತರರನ್ನು ಪ್ರೇರೇಪಿಸುತ್ತದೆ ಎಂದು ಆಶಿಸಿದ್ದಾರೆ. ಆಕೆಯ ಪ್ರಯಾಣವು 22 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು.
ಹ್ಯಾಂಪ್‌ಶೈರ್‌ನ ರಿಂಗ್‌ವುಡ್‌ನ 38 ವರ್ಷದ ಜೆನ್ನಿಫರ್ ಸುಟ್ಟನ್ ಅವರು ಕಾರ್ಡಿಯೊಮಿಯೊಪತಿಯಿಂದ ಬಳಲುತ್ತಿದ್ದರು. ಜೆನ್ನಿಫರ್ ಬದುಕುಳಿಯಬೇಕಾದ್ರೆ ಹೃದಯದ ಕಸಿ ಮಾಡುವುದು ಅನಿವಾರ್ಯವಾಗಿತ್ತು. ಸೂಕ್ತ ದಾನಿಗಾಗಿ ಕಾಯುತ್ತಿರುವಾಗ ಆಕೆಯ ಆರೋಗ್ಯ ಹದಗೆಟ್ಟಿತು. ನಂತರ, ಜೂನ್ 2007 ರಲ್ಲಿ ಅಂಗಾಂಗ ಕಸಿ ಮಾಡಲಾಯ್ತು. ಇದಾದ 16 ವರ್ಷಗಳ ನಂತರ, ಅವಳು ತನ್ನ ಸಂರಕ್ಷಿತ ಹೃದಯದ ಮುಂದೆ ನಿಂತಿದ್ದಾಳೆ.
ಹೌದು, ಲಂಡನ್‌ನಲ್ಲಿರುವ ಹಂಟೇರಿಯನ್ ಮ್ಯೂಸಿಯಂನಲ್ಲಿ ತನ್ನ ಅಂಗವನ್ನು ಪ್ರದರ್ಶನಕ್ಕೆ ಇಟ್ಟಿರುವುದನ್ನು ನೋಡುವುದು ನಂಬಲಾಗದಷ್ಟು ಅತಿವಾಸ್ತವಿಕವಾಗಿದೆ ಎಂದು ಜೆನ್ನಿಫರ್ ಸುಟ್ಟನ್ ಹೇಳಿದ್ದಾರೆ. ಇದು ನನ್ನ ಸ್ನೇಹಿತನಂತೆ. ಇದು ನನ್ನನ್ನು 22 ವರ್ಷಗಳ ಕಾಲ ಜೀವಂತವಾಗಿರಿಸಿತ್ತು. ನಾನು ನಿಜವಾಗಿಯೂ ಅದರ ಬಗ್ಗೆ ಹೆಮ್ಮೆಪಡುತ್ತೇನೆ ಎಂದಿದ್ದಾಳೆ.