alex Certify ಬಿಗ್ ನ್ಯೂಸ್..! ಬದಲಾಗ್ತಿದೆ ಉಚಿತ LPG ಯೋಜನೆಯ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್..! ಬದಲಾಗ್ತಿದೆ ಉಚಿತ LPG ಯೋಜನೆಯ ನಿಯಮ

ಎಲ್‌ಪಿಜಿ ಗ್ಯಾಸ್ ಸಂಪರ್ಕ ಪಡೆಯುವವರಿಗೊಂದು ಖುಷಿ ಸುದ್ದಿಯಿದೆ. ಕೇಂದ್ರ ಸರ್ಕಾರ, ಉಜ್ವಲ ಯೋಜನೆಯ ಎರಡನೇ ಹಂತವನ್ನು ಜಾರಿಗೆ ತರಲಿದೆ. ಇದ್ರ ವಿಶೇಷವೆಂದ್ರೆ, ಶಾಶ್ವತ ವಿಳಾಸ ಹೊಂದಿರದವರಿಗೂ ಎಲ್ಪಿಜಿ ಸಂಪರ್ಕ ಸಿಗಲಿದೆ.

ಸರ್ಕಾರದ ಈ ಯೋಜನೆಯಿಂದಾಗಿ ನಗರಗಳಲ್ಲಿ ವಾಸಿಸುವ ಬಡವರಿಗೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಉದ್ಯೋಗದ ಕಾರಣ ಸ್ಥಳ ಬದಲಾಯಿಸುವವರಿಗೆ ಪ್ರಯೋಜನವಾಗಲಿದೆ. ಈ ನಿಯಮವನ್ನು ಶೀಘ್ರವೇ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.

ಮೊದಲ ಉಜ್ವಲ ಯೋಜನೆಯನ್ನು 2016ರಲ್ಲಿ ಉತ್ತರ ಪ್ರದೇಶದಲ್ಲಿ ಶುರು ಮಾಡಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಎಲ್.ಪಿ.ಜಿ. ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತದೆ. ಪೆಟ್ರೋಲಿಯಂ ಸಚಿವಾಲಯದ ಅಡಿಯಲ್ಲಿರುವ ಸರ್ಕಾರಿ ತೈಲ ಕಂಪನಿಗಳು ಈಗ ಉಜ್ವಲ ಯೋಜನೆಯ ಎರಡನೇ ಹಂತದ ಅಂತಿಮ ಕರಡನ್ನು ಸಿದ್ಧಪಡಿಸುತ್ತಿವೆ. ಇದರಲ್ಲಿ ಹಲವು ಪ್ರಮುಖ ಬದಲಾವಣೆ ಮಾಡಲಾಗುವುದು.

ಒಂದು ಸೀಮಿತ ಅವಧಿಯ ನಂತರ, ಫಲಾನುಭವಿಗಳು ಸಂಪರ್ಕವನ್ನು ಮುಂದುವರಿಸುವ ಅಥವಾ ಹಿಂದಿರುಗಿಸುವ ಆಯ್ಕೆಯನ್ನು ಪಡೆಯುತ್ತಾರೆ. ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಎರಡೂ ಬದಲಾವಣೆಗಳನ್ನು ಮಾಡಲಾಗುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...