ಆರೋಗ್ಯ ವಿಮೆ ಮಹತ್ವ, ಕೊರೊನಾ ಸಂದರ್ಭದಲ್ಲಿ ಅನೇಕರಿಗೆ ಗೊತ್ತಾಗಿದೆ. ಗಂಭೀರ ಖಾಯಿಲೆಗಳಿಗೆ ಆರೋಗ್ಯ ವಿಮೆ ಬಹಳಷ್ಟು ನೆರವಾಗುತ್ತದೆ. ವಿಮಾ ಕಂಪನಿಗಳು ವಿವಿಧ ರೀತಿಯ ಕಾಯಿಲೆಗಳಿಗೆ ಆರೋಗ್ಯ ವಿಮೆಯನ್ನು ನೀಡುತ್ತಿವೆ. ಆದರೆ ನವಜಾತ ಶಿಶುಗಳು ಹಾಗೂ ಅವರ ಖಾಯಿಲೆಗೆ ಯಾವುದೇ ಆರೋಗ್ಯ ವಿಮೆ ಲಭ್ಯವಿಲ್ಲ. ಶೀಘ್ರವೇ ನವಜಾತ ಶಿಶುಗಳಿಗೆ ಆರೋಗ್ಯ ವಿಮೆ ಲಭ್ಯವಾಗಲಿದೆ. ಇದಕ್ಕೆ ಎರಡು ಖಾಸಗಿ ವಿಮಾ ಕಂಪನಿಗಳು ಒಪ್ಪಿಗೆ ಸೂಚಿಸಿವೆ.
ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್: ನ್ಯಾಯಬೆಲೆ ಅಂಗಡಿಯಲ್ಲಿ ಮಿನಿ ಸಿಲಿಂಡರ್
ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್, ಎರಡು ಖಾಸಗಿ ವಿಮಾ ಕಂಪನಿಗಳು ಹುಟ್ಟುವ ಮಕ್ಕಳಿಗೆ ಆರೋಗ್ಯ ವಿಮೆ ನೀಡಲು ಒಪ್ಪಿಕೊಂಡಿವೆ ಎಂದಿದೆ. ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ ಕಂಪನಿ ಮುಂದೆ ಬಂದಿದೆ. ನವಜಾತ ಶಿಶುಗಳಿಗೆ ಕಾಡುವ ರೋಗದ ಚಿಕಿತ್ಸೆಗೆ ಇನ್ಮುಂದೆ ಪಾಲಕರು ಈ ವಿಮೆ ಸೌಲಭ್ಯ ಪಡೆಯಬಹುದು.
ದಂಪತಿ ಪಾಲಿಸಿಯನ್ನು ತೆಗೆದುಕೊಳ್ಳಬೇಕು. ಹುಟ್ಟುವ ಮಗುವಿಗೆ ಯಾವುದೇ ಸಮಸ್ಯೆ ಉಂಟಾದರೆ ಈ ಪಾಲಿಸಿಯ ಮೂಲಕ ಪ್ರಯೋಜನಗಳನ್ನು ಪಡೆಯಬಹುದು. ಮಗು ಜನಿಸಿದ ಎರಡು ವರ್ಷಗಳವರೆಗೆ ಯಾವುದೇ ತೊಂದರೆಯಾದರೆ ವಿಮಾ ಸೌಲಭ್ಯದ ಪ್ರಯೋಜನ ದೊರೆಯುತ್ತದೆ. ಐಆರ್ಡಿಎಐ ಅನುಮೋದನೆ ಸಿಕ್ಕ ನಂತ್ರ ಜನಸಾಮಾನ್ಯರಿಗೆ ಈ ವಿಮೆ ಲಭ್ಯವಾಗಲಿದೆ.