ನವದೆಹಲಿ: ಫ್ಲಿಪ್‌ಕಾರ್ಟ್ ವೆಬ್ಸೈಟ್ನಲ್ಲಿ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ಅವುಗಳಲ್ಲಿ ಒಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 13. ಹಿಂದೆಂದೂ ಕೇಳಿರದಷ್ಟು ರಿಯಾಯಿತಿ ದರದಲ್ಲಿ ಈ ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಬಹುದು.
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಫ್ 13 ಮೂಲ ಬೆಲೆ 14,999 ರೂ. ಆದರೆ ಇದರ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ಜತೆಗೆ ವಿನಿಮಯ ಕೊಡುಗೆಯನ್ನೂ ನೀಡಲಾಗುತ್ತಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ರೂ. 11,999 ಗೆ ಇದರ ಬೆಲೆ ನಿಗದಿ ಮಾಡಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 13 ಸ್ಮಾರ್ಟ್ ಫೋನ್ 5,000mAh ಬ್ಯಾಟರಿ ಮತ್ತು Exonys 850 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 64GB ಇಂಟರ್ನಲ್ ಸ್ಟೋರೇಜ್ ಮತ್ತು 4GB RAM ಅನ್ನು ಹೊಂದಿದೆ.
ಹೆಚ್ಚುವರಿಯಾಗಿ, ಬಳಕೆದಾರರು ತಮ್ಮ ಹಿಂದಿನ ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ಈ ಫೋನ್ ದರವನ್ನು 949 ರವರೆಗೂ ಇಳಿಸಬಹುದು ಎಂದು ಕಂಪೆನಿ ಹೇಳಿದೆ. ಅಮೇಜಾನ್ ಕೂಡ Galaxy F13 ನಲ್ಲಿ ಗಮನಾರ್ಹ ರಿಯಾಯಿತಿಯನ್ನು ಘೋಷಿಸಿದೆ.
ಎಸ್‌ಬಿಐ ಕಾರ್ಡ್ ಬಳಸಿಕೊಂಡು ರೂ. 5,000 ಅಥವಾ ಅದಕ್ಕಿಂತ ಹೆಚ್ಚಿನ ಖರೀದಿಗೆ ರೂ. 1000 ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತಿದೆ. ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿ ಮಾಡಿದರೆ, ತಕ್ಷಣವೇ 1,500 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ.