ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನೋಯ್ಡಾದಲ್ಲಿ ಉದ್ಯಮಿಯೊಬ್ಬರಿಂದ 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಲೆಕ್ಕಕ್ಕೆ ಸಿಗದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸ್ಥಳೀಯ ಸೆಕ್ಟರ್ 58 ಪೊಲೀಸ್ ಠಾಣೆ ಮತ್ತು ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ ಜಂಟಿ ಕಾರ್ಯಾಚರಣೆಯಲ್ಲಿ ಬುಧವಾರ ನಗರದ ಸೆಕ್ಟರ್ 60 ಪೊಲೀಸ್ ಪೋಸ್ಟ್ ಬಳಿ ಉದ್ಯಮಿಯನ್ನು ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ELECTION BREAKING: ಹುಬ್ಬಳ್ಳಿ –ಧಾರವಾಡ ಬಿಜೆಪಿ, ಕಲಬುರಗಿ ಕಾಂಗ್ರೆಸ್, ಬೆಳಗಾವಿಯಲ್ಲಿ ಪಕ್ಷೇತರರ ಪ್ರಾಬಲ್ಯ
ನೋಯ್ಡಾದ ಸೆಕ್ಟರ್ 19 ರ ನಿವಾಸಿ ರೋಹಿತ್ ಅವಾನಾ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದ ಐಷಾರಾಮಿ ಪೋರ್ಷೆ ಕಾರಿನಲ್ಲಿ ಲೆಕ್ಕಚಾರಕ್ಕೆ ಸಿಗದ 21 ಲಕ್ಷ ರೂ.ಗೂ ಹೆಚ್ಚು ನಗದು ಪತ್ತೆಯಾಗಿದೆ. ಈ ಕಾರು ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿತ್ತು ಎಂದು ಸಹಾಯಕ ಪೊಲೀಸ್ ಆಯುಕ್ತ (ನೋಯ್ಡಾ 2) ರಜನೀಶ್ ವರ್ಮಾ ತಿಳಿಸಿದ್ದಾರೆ.
“ಅವಾನಾ ಅವರು ಪೆಟ್ರೋಲ್ ಪಂಪ್ ನಡೆಸುತ್ತಿದ್ದು, ಕಳೆದ ಮೂರು-ನಾಲ್ಕು ದಿನಗಳ ಸಂಗ್ರಹದ ಹಣದೊಂದಿಗೆ ಗೌರ್ ನಗರದಿಂದ (ಗ್ರೇಟರ್ ನೋಯ್ಡಾ ಪಶ್ಚಿಮದಲ್ಲಿ) ಮನೆಗೆ ಮರಳುತ್ತಿದ್ದರು. ಆದಾಗ್ಯೂ, ಅವರು ಹಣದ ಮೇಲೆ ತಮ್ಮ ಹಕ್ಕನ್ನು ದೃಢೀಕರಿಸಲು ಯಾವುದೇ ದಾಖಲೆಯನ್ನು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾನೂನಿನ ಪ್ರಕಾರ ಹಣವನ್ನು ವಶಪಡಿಸಿಕೊಳ್ಳಲಾಗಿದೆ,” ಎಂದು ವರ್ಮಾ ಹೇಳಿದರು.
ವಶಪಡಿಸಿಕೊಂಡ ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.
ಅವಾನಾ ಅವರನ್ನು ವಿಚಾರಣೆಗೊಳಪಡಿಸಿ, ಸೂಕ್ತ ಕಾರ್ಯವಿಧಾನಗಳ ನಂತರ ಬಿಡುಗಡೆ ಮಾಡಲಾಯಿತು. ಮುಂಬರುವ ವಿಧಾನ ಸಭಾ ಚುನಾವಣೆಯೊಂದಿಗೆ ಈ ನಗದು ನಂಟು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಚುನಾವಣಾ ನಿಮಿತ್ತು ನೋಯ್ಡಾದಲ್ಲಿ ಇದುವರೆಗೂ 1.50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ‘ಲೆಕ್ಕದಲ್ಲಿಲ್ಲದ ನಗದನ್ನು’ ವಶಪಡಿಸಿಕೊಳ್ಳಲಾಗಿದೆ.
ಗೌತಮ್ ಬುದ್ಧ ನಗರ ಜಿಲ್ಲೆಯ ನೋಯ್ಡಾ ವಿಧಾನ ಸಭಾ ಕ್ಷೇತ್ರದಲ್ಲಿ ಫೆಬ್ರವರಿ 10 ರಂದು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನ ನಿಗದಿಯಾಗಿದೆ.