ಅಣ್ಣಾ ಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ಹುದ್ದೆಯನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ ವಿಕೆ ಶಶಿಕಲಾ ವಿರುದ್ಧ ಪಕ್ಷದ ಮಾಜಿ ಸಚಿವ ಜಯಕುಮಾರ್ ದೂರು ದಾಖಲಿಸಿದ್ದಾರೆ.
ಪಕ್ಷದ ಜಂಟಿ ಸಹಯೋಜಕ ಕೆ. ಪಳನಿಸ್ವಾಮಿಯವರೇ ಎಐಎಡಿಎಂಕೆಯಲ್ಲಿ ಶಶಿಕಲಾಗೆ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದರೂ ಸಹ, ಶಶಿಕಲಾ ಎಐಎಡಿಎಂಕೆ ಮಹಾ ಕಾಯದರ್ಶಿ ಎಂದು ತಮ್ಮ ಅಧಿಕೃತ ಪರಿಚಯಗಳಲ್ಲಿ ಹೇಳಿಕೊಂಡು ಬರುತ್ತಿದ್ದು, ಪಕ್ಷದ ಸ್ಥಾಪಕ ಎಂಜಿ ರಾಮಚಂದ್ರನ್ ಸ್ಮಾರಕ ಮನೆಯಲ್ಲೂ ಸಹ ಇದೇ ರೀತಿಯ ಫಲಕವೊಂದನ್ನು ಹಾಕಿದ್ದಾರೆ.
ಸದ್ಯಕ್ಕೆ ಇಬ್ಬರು ತತ್ಸಮಾನ ನಾಯಕರನ್ನು ಹೊಂದಿರುವ ಎಐಎಡಿಎಂಕೆ ಶಶಿಕಲಾ ವಿರುದ್ಧ ಹೇಳಿಕೆ ನೀಡುವ ಸಮಗ್ರ ಯತ್ನವನ್ನು ಇದುವರೆಗೂ ಮಾಡಿಲ್ಲ. ಪಕ್ಷದ ಮತ್ತೊಬ್ಬ ಸಹಯೋಜಕ ಓ. ಪನ್ನೀರಸೆಲ್ವಂ ಇದುವರೆಗೂ ಘಟನೆ ಕುರಿತು ಮಾತನಾಡಿಲ್ಲ.
ಕಳೆದ ಅಕ್ಟೋಬರ್‌ನಲ್ಲಿ ನಗರದ ಪೊಲೀಸ್ ಆಯುಕ್ತರ ಬಳಿ ತೆರಳಿದ್ದ ಜಯಕುಮಾರ್, ತಮಗೆ ಯಾವುದೇ ಅಧಿಕೃತ ಅರ್ಹತೆ ಇಲ್ಲದಿದ್ದರೂ ಸಹ ಕಚೇರಿಯೊಂದನ್ನು ಅಕ್ರಮವಾಗಿ ಆವರಿಸಿದ್ದಾರೆ ಎಂದು ದೂರು ಕೊಟ್ಟಿದ್ದರು. ಮಾಂಬಲಂ ಪೊಲೀಸ್ ನಿರೀಕ್ಷಕರಿಗೆ ಎಫ್‌ಐಆರ್ ದಾಖಲಿಸಿ ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಈ ವೇಳೆ ಜಯಕುಮಾರ್ ಆಗ್ರಹಿಸಿದ್ದರು.
ಎಂಜಿಆರ್‌ರ ಪುಣ್ಯತಿಥಿಯಾದ ಡಿಸೆಂಬರ್ 24ರಂದು ಪಕ್ಷದ ಕಾರ್ಯಕರ್ತರೊಂದಿಗೆ ಎಐಎಡಿಎಂಕೆ ಸ್ಥಾಪಕರ ಮನೆಯತ್ತ ಬರುವುದಾಗಿ ಶಶಿಕಲಾ ಘೋಷಿಸಿರುವ ಬೆನ್ನಲ್ಲೇ ಜಯಕುಮಾರ್‌ರಿಂದ ಈ ದೂರು ಬಂದಿದೆ.