ತಾಲಿಬಾನಿಗಳೊಂದಿಗೆ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್ ಮಾಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಡುಗಿದ ಭಾರತ, ಭಾರತವನ್ನು ಕೆಣಕುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿದೆ.
ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಉಗ್ರವಾದದ ವಿರುದ್ಧ ಭಾಷಣ ಮಾಡಿದ ವಿದೇಶಾಂಗ ಸಚಿವ ಜೈಶಂಕರ್ ಗುಡುಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗಳು ಅಟ್ಟಹಾಸ ಮೆರೆಯುತ್ತಿರುವ ಹೊತ್ತಲ್ಲೇ ಅವರು ವಾರ್ನಿಂಗ್ ಮಾಡಿದ್ದಾರೆ. ಜಗತ್ತಿನ ಅರ್ಧದಷ್ಟು ಜನರು ಭಯೋತ್ಪಾದನೆ ಎದುರಿಸುತ್ತಿದ್ದೇವೆ. ಸಾವು-ನೋವುಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.
ಭಾರತದ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದು ಹೇಳಿದ್ದು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ್ದಾರೆ. ಜಗತ್ತಿಗೆ ಅಪಾಯಕಾರಿಯಾಗಿರುವ ಐಸಿಸ್, ಲಷ್ಕರ್ ಎ ತೋಯ್ಬಾ ಸೇರಿ ಹಲವು ಉಗ್ರ ಸಂಘಟನೆಗಳು ತಾಲಿಬಾನ್ ಸಂಪರ್ಕಕ್ಕೆ ಬರುತ್ತಿದ್ದು, ವಿಶ್ವದಲ್ಲಿ ಆತಂಕ ಮೂಡಿಸಿದೆ. ಇದೇ ವೇಳೆ ಭಾರತ ಸ್ಪಷ್ಟ ಮತ್ತು ಖಡಕ್ ಸಂದೇಶ ರವಾನಿಸಿದೆ.
ಉಗ್ರರನ್ನು ಪೋಷಿಸುವ ರಾಷ್ಟ್ರಗಳಿಗೆ ಕೂಡ ಎಚ್ಚರಿಕೆ ನೀಡಲಾಗಿದೆ. ಭಯೋತ್ಪಾದನೆ ವಿರುದ್ಧದ ಸಮರ ತೀವ್ರಗೊಳಿಸಲು ಎಚ್ಚರಿಕೆ ನೀಡಲಾಗಿದ್ದು, ಇಂತಹ ಭಯೋತ್ಪಾದನೆ ಜಗತ್ತಿನ ಬೆಳವಣಿಗೆಗೆ ಮಾರಕ ಎಂದು ಹೇಳಲಾಗಿದೆ.