
ವಿಜಯಪುರ: ವಿಜಯಪುರ ತಾಲೂಕಿನ ಬುರಣಾಪುರ ಬಳಿ ಸಚಿವ ಉಮೇಶ್ ಕತ್ತಿ ಅವರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ವೀಕ್ಷಿಸಿದ್ದಾರೆ.
ಕಾಮಗಾರಿ ವೀಕ್ಷಣೆಯ ವೇಳೆ ಅವರು ಉಡಾಫೆ ಮಾತುಗಳನ್ನಾಡಿದ್ದಾರೆ. ಹಾಸ್ಯ ಮಾಡುವ ಭರದಲ್ಲಿ ಎಡವಟ್ಟಿನ ಮಾತನಾಡಿ ಅಧಿಕಾರಿಗೆ ಬೂಟಿನಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದಾರೆ.
ಕಾಮಗಾರಿ ವೀಕ್ಷಿಸಿದ ಸಚಿವರು, ವಿಮಾನ ನಿಲ್ದಾಣ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ಲೋಕೋಪಯೋಗಿ ಇಲಾಖೆ ಎಇಇಗೆ ಪ್ರಶ್ನಿಸಿದ್ದಾರೆ. ಡಿಸೆಂಬರ್ ಒಳಗೆ ಕಾಮಗಾರಿ ಮುಗಿಯಲಿದೆ ಎಂದು ಎಇಇ ಹೇಳಿದ್ದಾರೆ. ಡಿಸೆಂಬರ್ ಒಳಗೆ ಕಾಮಗಾರಿ ಮುಗಿಯಲ್ಲ ಎಂದು ಹೇಳಿದ ಸಚಿವ ಉಮೇಶ್ ಕತ್ತಿ, ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಹೂವಿನ ಮಾಲೆ ಹಾಕುತ್ತೇನೆ. ಇಲ್ಲವಾದರೆ ಬೂಟ್ ನಲ್ಲಿ ಹೊಡೆಯುವೆ ಎಂದು ಹೇಳಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕ್ಷಕರ ಎದುರೇ ನಿಂದನೆಯ ಮಾತುಗಳನ್ನಾಡಿದ್ದಾರೆನ್ನಲಾಗಿದೆ.