ಟಾಟಾ ಐಪಿಎಲ್‌ನ ಅಧಿಕೃತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಜಿಯೋ ಸಿನಿಮಾ, ಟಾಟಾ ಐಪಿಎಲ್-2024ರ ಋತುವಿನಲ್ಲಿ 2,600 ಕೋಟಿ ವೀಕ್ಷಣೆ ದಾಖಲೆಯೊಂದಿಗೆ ಮತ್ತೊಂದು ಯಶಸ್ವಿ ಆವೃತ್ತಿಗೆ ತೆರೆ ಎಳೆದಿದೆ. ಇದು ಟಾಟಾ ಐಪಿಎಲ್-2023ಕ್ಕೆ ಹೋಲಿಸಿದರೆ ಶೇ. 53ರಷ್ಟು ಪ್ರಗತಿಯಾಗಿದೆ. ಜಿಯೋಸಿನಿಮಾ ಐಪಿಎಲ್ನಲ್ಲಿ ತನ್ನ ಎರಡನೇ ಋತುವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಈ ಪ್ಲಾಟ್‌ಫಾರ್ಮ್ 35,000 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆಯ ಸಮಯವನ್ನು ದಾಖಲಿಸಿದೆ.
ಟೂರ್ನಿಯ ಮೊದಲ ದಿನದ ಅದ್ಭುತ ಆರಂಭವನ್ನು ನಂತರದಲ್ಲೂ ಮುಂದುವರಿಸಿರುವ ಜಿಯೋ ಸಿನಿಮಾ, ತನ್ನ ವ್ಯಾಪ್ತಿಯನ್ನು ಶೇ. 38ಕ್ಕಿಂತ ಅಧಿಕವಾಗಿ ಬೆಳೆಸಿದ್ದು, 62 ಕೋಟಿಗೂ ಅಧಿಕ ವಿಕ್ಷಣೆಯೊಂದಿಗೆ ಮುಕ್ತಾಯಗೊಳಿಸಿತು. 12 ಭಾಷೆಯ ಫೀಡ್‌ಗಳು, 4ಕೆ ವೀಕ್ಷಣೆ, ಮಲ್ಟಿ-ಕ್ಯಾಮ್ ವೀಕ್ಷಣೆಗಳು ಮತ್ತು ಎಆರ್/ವಿಆರ್ಮೂಲಕ ಕ್ರೀಡಾಂಗಣದಂಥ ಅನುಭವ ಮತ್ತು 360-ಡಿಗ್ರಿ ವೀಕ್ಷಣೆಯು ಸರಾಸರಿ ಸಮಯವನ್ನು 75 ನಿಮಿಷಗಳಿಗೆ ಮುಟ್ಟುವಂತೆ ಮಾಡಿದ್ದರಿಂದ ಸಂಪರ್ಕಿತ ಟಿವಿ ವೀಕ್ಷಕರು ಗಣನೀಯವಾಗಿ ವಿಸ್ತರಿಸಿದರು. ಕಳೆದ ಆವೃತ್ತಿಯಲ್ಲಿ ವೀಕ್ಷಣೆಯ ಸರಾಸರಿಯು 60 ನಿಮಿಷಗಳಾಗಿತ್ತು.
ಜಿಯೋ ಸಿನಿಮಾ 2024ರ ಆವೃತ್ತಿಯನ್ನು 11.3 ಕೋಟಿ ವೀಕ್ಷಕರು ಮೊದಲ ದಿನದಂದೇ ಲಾಗ್ಇನ್ ಆಗುವುದರೊಂದಿಗೆ ಆರಂಭಿಸಿತ್ತು. ಟಾಟಾ ಐಪಿಎಲ್-2023ರ ಮೊದಲ ದಿನಕ್ಕೆ ಹೋಲಿಸಿದರೆ ಇದು ಶೇ.51ರಷ್ಟು ಹೆಚ್ಚಳವಾಗಿದೆ. ಜಿಯೋ ಸಿನಿಮಾ ತನ್ನ ಎರಡನೇ ಆವೃತ್ತಿಯನ್ನು ಡಿಜಿಟಲ್‌ನಲ್ಲಿ ಪ್ರಾರಂಭಿಸುತ್ತಿದ್ದಂತೆ, ಟಾಟಾ ಐಪಿಎಲ್-2024ರ ಆರಂಭಿಕ ದಿನವು 59 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಪ್ಲಾಟ್ಫಾರ್ಮ್ನಲ್ಲಿ ದಾಖಲಿಸಿಕೊಂಡಿತು. ಅಂತಿಮವಾಗಿ ಇದು 660 ಕೋಟಿ ನಿಮಿಷಗಳ ವೀಕ್ಷಣೆ ಸಮಯಕ್ಕೆ ಕಾರಣವಾಯಿತು.
ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮತ್ತು ವ್ಯಾಟ್ಸ್ಆ್ಯಪ್ನಲ್ಲಿ ಜಿಯೋಸಿನಿಮಾ ಹಾಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ಮತ್ತು ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಅನ್ನು ಫಾಲೋ ಮಾಡಬಹುದು.