ಇಂಗ್ಲೆಂಡ್ ರಾಜಧಾನಿ ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಒಡಿಶಾ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಫಿನ್ ನೆಸ್ಟ್ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಬಿಸ್ವನಾಥ್ ಪಟ್ನಾಯಕ್ ದೇಣಿಗೆ ನೀಡಿದವರಾಗಿದ್ದಾರೆ.
ಲಂಡನ್ ಹೊರವಲಯದಲ್ಲಿ 15 ಎಕರೆ ವಿಸ್ತೀರ್ಣ ಜಾಗದಲ್ಲಿ ಈ ಭವ್ಯ ದೇಗುಲ ನಿರ್ಮಾಣವಾಗುತ್ತಿದ್ದು, ಜಗನ್ನಾಥ ಭಕ್ತರ ಕನಸನ್ನು ನನಸಾಗಿಸಲು ಈ ದೇಣಿಗೆ ನೀಡುತ್ತಿರುವುದಾಗಿ ಪಟ್ನಾಯಕ್ ಘೋಷಿಸಿದ್ದಾರೆ. ಈ ಮೂಲಕ ಭಾರತದಿಂದ ಹೊರಗೆ ನಿರ್ಮಾಣವಾಗುತ್ತಿರುವ ದೇಗುಲ ಒಂದಕ್ಕೆ ನೀಡಿರುವ ಅತಿ ದೊಡ್ಡ ದೇಣಿಗೆ ಎಂದು ಇದನ್ನು ಪರಿಗಣಿಸಲಾಗಿದೆ.
ಜಗನ್ನಾಥನ ಪರಮ ಭಕ್ತರಾಗಿರುವ ಬಿಸ್ವನಾಥ್ ಪಟ್ನಾಯಕ್ ಭಾರಿ ಮೊತ್ತದ ಈ ದೇಣಿಗೆಯನ್ನು ನೀಡಿದ್ದು, ಈ ದೇವಾಲಯ ಮುಂದಿನ ದಿನಗಳಲ್ಲಿ ಭಕ್ತರನ್ನು ಆಕರ್ಷಿಸಲಿದೆ. 2024ರ ಅಂತ್ಯದ ವೇಳೆಗೆ ಈ ಭವ್ಯ ದೇಗುಲದ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.