
ನವದೆಹಲಿ: ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಚೆರ್ನಿವ್ಟ್ರಿಯಿಂದ ಭಾರತೀಯ ವಿದ್ಯಾರ್ಥಿಗಳು ಪ್ರಯಾಣ ಬೆಳೆಸಲಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಮೊದಲ ತಂಡ ಪ್ರಯಾಣ ಬೆಳೆಸಲಿದೆ.
ಭಾರತೀಯ ವಿದ್ಯಾರ್ಥಿಗಳು ರೊಮೇನಿಯಾ ಗಡಿಯತ್ತ ಆಗಮಿಸುತ್ತಿದ್ದು, ಚೆರ್ನಿವ್ಟ್ರಿ, ಎಲ್ಡೀವ್ ನಲ್ಲಿ MEA ಕ್ಯಾಂಪ್ ಕಚೇರಿಯನ್ನು ಓಪನ್ ಮಾಡಲಾಗಿದೆ. ಶೇಹನೈ, ಮೆಡಿಕಾ ಗಡಿ ದಾಟುವಂತೆ ಭಾರತೀಯರಿಗೆ ಸಲಹೆ ನೀಡಲಾಗಿದೆ. ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ಉಕ್ರೇನ್ ನಲ್ಲಿರುವ ಭಾರತೀಯರಿಗೆ ಸಲಹೆ ನೀಡಿದ್ದು, ಪೋಲೆಂಡ್ ಮತ್ತು ಉಕ್ರೇನ್ ಗಡಿಗೆ ಸಾರ್ವಜನಿಕ ಸಾರಿಗೆ ಮೂಲಕ ಬರುವ ಭಾರತೀಯರಿಗೆ ಸಲಹೆ ನೀಡಲಾಗಿದೆ.