ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರೆಸಿರುವ ಸಮಯದಲ್ಲಿ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ಗ್ರಾಮದಲ್ಲಿ ಕುಟುಂಬವೊಂದು ಯುದ್ಧ ನಿಲ್ಲಲಿ ಎಂದು ಪ್ರಾರ್ಥನೆ ನಡೆಸುತ್ತಿದೆ.
ಉಕ್ರೇನ್‌ನಲ್ಲಿ ಜನಿಸಿದ ಒಲೆಸಿಯಾ ಮಜೂರ್ ಯುದ್ಧದ ನಡುವೆ ಸಿಲುಕಿರುವ ತನ್ನ ಪೋಷಕರು ಮತ್ತು ಅಜ್ಜಿಗಾಗಿ ಹಗಲು ರಾತ್ರಿ ಪ್ರಾರ್ಥಿಸುತ್ತಿದ್ದಾರೆ.
ಒಲೆಸಿಯಾ ಕಾಶ್ಮೀರಿ ಉದ್ಯಮಿ ಬಿಲಾಲ್ ಅಹ್ಮದ್ ಅವರನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾಶ್ಮೀರದಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
ಕೆಲಸ ಕೊಡಿಸುವುದಾಗಿ ಅತ್ಯಾಚಾರ, ಖಾಸಗಿ ವಾಹಿನಿ ಪತ್ರಕರ್ತ ಅರೆಸ್ಟ್
ಕಳೆದ 10 ದಿನಗಳಿಂದ ಆಕೆಗೆ ಸಂಕಷ್ಟ ಎದುರಾಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ಪೋಷಕರು ಮತ್ತು ಅಜ್ಜಿಯ ಬಗ್ಗೆ ಚಿಂತಿತಳಾಗಿದ್ದಾಳೆ. ಅಷ್ಟೇ ಅಲ್ಲ ಪ್ರಧಾನಿ ಮೋದಿಯವರಿಗೆ ಹಿಂಸಾಚಾರವನ್ನು ಕೊನೆಗೊಳಿಸುವಂತೆ ರಷ್ಯಾವನ್ನು ತಾಕೀತು ಮಾಡುವಂತೆ ಮನವಿ ಮಾಡಿದ್ದಾಳೆ.
ರಷ್ಯಾದ ಬಗ್ಗೆ ನನಗೆ ಕೋಪವಿದೆ. ನನ್ನ ಪೋಷಕರು ಮತ್ತು ಅಜ್ಜಿಯ ಬಗ್ಗೆ ತುಂಬಾ ಚಿಂತಿತಳಾಗಿದ್ದೇನೆ. ಅವರೆಲ್ಲರೂ ಮನೆಯಲ್ಲಿ ಸಿಲುಕಿಕೊಂಡಿದ್ದು, ತುಂಬಾ ವಯಸ್ಸಾದ ಕಾರಣ ಆ ಸ್ಥಳದಿಂದ ಹೋಗುವುದು ತುಂಬಾ ಕಷ್ಟ. ಯುದ್ಧವು ತೀವ್ರಗೊಂಡರೆ, ಅವರು ಏನು ಮಾಡುತ್ತಾರೆಂದು ನನಗೆ ತಿಳಿದಿಲ್ಲ ಎಂದು ಒಲೆಸಿಯಾ ಮಜೂರ್ ಹೇಳಿದ್ದಾರೆ.
ಭಾರತವು ಉಕ್ರೇನ್‌ಗೆ ಬೆಂಬಲ ನೀಡಲಿ ಮತ್ತು ತನ್ನ ತಾಯ್ನಾಡಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವಂತೆ ರಷ್ಯಾಕ್ಕೆ ತಿಳಿಸುವಂತೆ ಒಲೆಸಿಯಾ ಮೋದಿಯವರಿಗೆ ಮನವಿ ಮಾಡಿದರು.