ರಷ್ಯಾದ ಕ್ಷಿಪಣಿ ದಾಳಿಯಿಂದ ಬದುಕುಳಿದ ನಂತರ ಉಕ್ರೇನಿಯನ್ ಶಿಕ್ಷಕಿಯ ರಕ್ತ ಸಿಕ್ತ ಮುಖವು “ಫೇಸ್ ಆಫ್ ವಾರ್” ಆಗಿ ಕಾಣಿಸಿದೆ.
ಹೀಗೆ ಚಿತ್ರಿಸಿರುವುದು 52 ವರ್ಷದ ಒಲೆನಾ ಕುರಿಲೋ ಎಂಬ ಶಿಕ್ಷಕಿಯ ಫೋಟೋ ಆಗಿದೆ. ಕ್ಷಿಪಣಿಯಿಂದ ಬದುಕುಳಿದ ನಂತರ ತನ್ನ ತಾಯ್ನಾಡಿಗಾಗಿ “ಎಲ್ಲವನ್ನೂ ಮಾಡುತ್ತೇನೆ” ಎಂದು ಆಕೆ ಪ್ರತಿಜ್ಞೆ ಮಾಡಿದ್ದಾರೆ.
ಮಗಳ ಮೇಲೆ ಅತ್ಯಾಚಾರಕ್ಕೆ ಸಹಕಾರ ನೀಡಿದ ಮಹಿಳೆ, ಗೆಳೆಯನಿಗೆ ತಕ್ಕ ಶಾಸ್ತಿ
ಖಾರ್ಕಿವ್ ಪ್ರದೇಶದ ಚುಗೆವ್‌ನಲ್ಲಿರುವ ಆಕೆಯ ಮನೆಯು ರಷ್ಯಾ ಶೆಲ್ ದಾಳಿಯಲ್ಲಿ ನಾಶವಾಯಿತು. ಮನೆ ಮೇಲೆ ನಡೆದ ದಾಳಿಯ ನಂತರ ಆಕೆಯ ಮುಖಕ್ಕೆ ಹಾರಿಹೋದ ಗಾಜಿನ ಚೂರುಗಳಿಂದ ಗಾಯಗಳಾಗಿ ರಕ್ತ ಸುರಿಯಲಾರಂಭಿಸಿತು.
ನಾನು “ಅತ್ಯಂತ ಅದೃಷ್ಟಶಾಲಿ” ಎಂದು ಅವರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕುರಿಲೋ ಅವರು ಇತಿಹಾಸ ಅಧ್ಯಯನ ಮಾಡಿದ ಶಿಕ್ಷಣ ತಜ್ಞರಾಗಿದ್ದು, ಇದು ಸಂಭವಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂಬುದರ ಕುರಿತು ಮಾತನಾಡಿದ್ದಾರೆ.
ನನಗೆ ಸಾಧ್ಯವಾದಷ್ಟು, ನನ್ನಲ್ಲಿರುವಷ್ಟು ಶಕ್ತಿಯಿಂದ ಉಕ್ರೇನ್‌ಗಾಗಿ ಎಲ್ಲವನ್ನೂ ಮಾಡುತ್ತೇನೆ ಎಂದಿರುವ ಅವರ ರಕ್ತಸಿಕ್ತ ಮುಖದ ಚಿತ್ರ ವೈರಲ್ ಆಗುತ್ತಿದೆ.
https://twitter.com/mgb5000/status/1497049636028092420?ref_src=twsrc%5Etfw%7Ctwcamp%5Etweetembed%7Ctwterm%5E1497049636028092420%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fukrainian-teacher-who-survived-russian-missile-becomes-internets-face-of-war-4813268.html
https://twitter.com/Tonyevill3/status/1497133250334109696?ref_src=twsrc%5Etfw%7Ctwcamp%5Etweetembed%7Ctwterm%5E1497133250334109696%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fukrainian-teacher-who-survived-russian-missile-becomes-internets-face-of-war-4813268.html