ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಡೆಗಳು ಉಕ್ರೇನ್‌ನಲ್ಲಿ ಮಾರಣಾಂತಿಕ ದಾಳಿ ಮಾಡಿದ ಕಾರಣ ಲಕ್ಷಾಂತರ ಜನ ದೇಶ ತೊರೆಯುತ್ತಿದ್ದು, ಮಹಿಳೆಯರು, ಮಕ್ಕಳು ಸೇರಿ ಕಷ್ಟಪಟ್ಟು ದೇಶವನ್ನು ಬಿಟ್ಟು ಪೋಲೆಂಡ್, ಸ್ಲೊವೇಕಿಯಾ ಸೇರಿ ಹಲವು ರಾಷ್ಟ್ರಗಳಿಗೆ ಹೋಗುತ್ತಿದ್ದಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿ ತಾಯಿ ಕೊಟ್ಟ ಪತ್ರ, ಮೊಬೈಲ್ ನಂಬರ್ ಹಿಡಿದು ಉಕ್ರೇನ್‌ನಿಂದ 750 ಮೈಲುಗಳವರೆಗೆ ಸಂಚರಿಸಿ ಸ್ಲೊವೇಕಿಯಾಗೆ ತೆರಳಿದ್ದ 11 ವರ್ಷದ ಬಾಲಕನು ಕೊನೆಗೂ ತಾಯಿಯ ಮಡಿಲು ಸೇರಿದ್ದಾನೆ.
ರಷ್ಯಾ ದಾಳಿ ಮಾಡಿದ ಕಾರಣ ಬಾಲಕನು ಕಳೆದ ವಾರ ಜಪೋರಿಜಿಯಾದ ಅಣು ವಿದ್ಯುತ್ ಸ್ಥಾವರ ಮೇಲೆ ದಾಳಿ ಮಾಡಿದ ಕಾರಣ ಜಪೋರಿಜಿಯಾದಿಂದ ತಾಯಿ ಪತ್ರ ಹಿಡಿದುಕೊಂಡು ಹಸನ್ ಪಿಸೇಕಾ ಸ್ಲೊವೇಕಿಯಾಗೆ ತೆರಳಿದ್ದ. ಈಗ ಬಾಲಕನ ತಾಯಿ ಯುಲಿಯಾ ಪಿಸೆಟ್ಸ್‌ಕಾಯ ಅವರು ಸಹ ಉಕ್ರೇನ್ ತೊರೆದಿದ್ದು, ಗಡಿಯಲ್ಲಿ ಅಧಿಕಾರಿಗಳ ಸಹಾಯದಿಂದ ಸ್ಲೊವೇಕಿಯಾ ತಲುಪಿದ್ದು, ತಾಯಿ-ಮಗ ಹಲವು ದಿನಗಳ ಬಳಿಕ ಸೇರಿದ್ದು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಬೆಂಗಳೂರಲ್ಲಿ ಆಘಾತಕಾರಿ ಘಟನೆ: ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ
ತಾಯಿ ಮಾತ್ರವಲ್ಲ, ಬಾಲಕನ ನಾಲ್ವರು ಸಹೋದರ-ಸಹೋದರಿಯರು, ಒಂದು ಸಾಕು ನಾಯಿ ಸಹ ಬಾಲಕನನ್ನು ಕೂಡಿಕೊಂಡಿದ್ದು, ಎಲ್ಲರೂ ಭಾವುಕರಾಗಿದ್ದಾರೆ. ’ರೈಲಿನಲ್ಲಿ ನೂರಾರು ಮೈಲು ಸಂಚರಿಸುವುದು ಕಷ್ಟವಾಯಿತು. ಅದರಲ್ಲೂ, ಒಂದೇ ಕಾರಿನಲ್ಲಿ ಬಹಳಷ್ಟು ಜನ ಕುಳಿತು ಉಕ್ರೇನ್‌ನಿಂದ ಪರಾರಿಯಾಗುವುದು ತೀರಾ ಕಷ್ಟವಾಯಿತು. ಈಗ ಕೊನೆಗೂ ನಾವೆಲ್ಲರೂ ನನ್ನ ಮಗನನ್ನು ಸೇರಿದ್ದು ಖುಷಿ ತಂದಿದೆ. ಇದಕ್ಕಾಗಿ ನೆರವು ನೀಡಿದ ಸ್ಲೊವೇಕಿಯಾ ಎಲ್ಲ ಅಧಿಕಾರಿಗಳಿಗೆ, ಸರಕಾರಕ್ಕೆ ಧನ್ಯವಾದಗಳು’ ಎಂದು ಯುಲಿಯಾ ಹೇಳಿದ್ದಾರೆ.