ಕಾಳಿ ದೇವಿಯ ಸ್ಫೋಟದ ಹೊಗೆಯುಳ್ಳ ಚಿತ್ರವನ್ನು ಉಕ್ರೇನ್ ಟ್ವೀಟ್ ಮಾಡಿದ್ದು, ಇದು ಭಾರತೀಯರನ್ನು ಕೆರಳಿಸಿದೆ. ಉಕ್ರೇನ್‌ನ ರಕ್ಷಣಾ ಸಚಿವಾಲಯದ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತೀಯರು ಉಕ್ರೇನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದೊಂದು ಆಕ್ರಮಣಕಾರಿ ಮತ್ತು ಹಿಂದೂಫೋಬಿಕ್ ಎಂದು ಭಾರತೀಯರು ದೂರಿದ್ದಾರೆ, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರವು, ಭಾರತೀಯ ದೇವಿ ಕಾಳಿಯ ಹಾಲಿವುಡ್ ನಟಿ ಮರ್ಲಿನ್ ಮನ್ರೋ ಅವರಂತೆಯೇ ಕಲಾಕೃತಿ ಎಂಬ ಶೀರ್ಷಿಕೆಯೊಂದಿಗೆ ಫೋಟೋ ಟ್ವೀಟ್ ಮಾಡಲಾಗಿದೆ. ಉಕ್ರೇನ್ ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯು ಚಿತ್ರದೊಂದಿಗೆ ಪೋಸ್ಟ್ ಮಾಡಿದ ಬಳಿಕ ಭಾರಿ ಆಕ್ರೋಶ ವ್ಯಕ್ತವಾಯಿತು. ಹೀಗಾಗಿ ನಂತರ ಇದನ್ನು ತೆಗೆದುಹಾಕಲಾಯಿತು.
ಭಾರತೀಯ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಿಂದೂ ದೇವತೆಯನ್ನು ಅಪಹಾಸ್ಯ ಮಾಡಿದ್ದಕ್ಕೆ ಕೋಪಗೊಂಡರು. ಭಾರತೀಯರು ಸಿಟ್ಟಿಗೆದ್ದುದನ್ನು ಮನಗಂಡು ಕೂಡಲೇ ಫೋಟೋವನ್ನು ಡಿಲೀಟ್ ಮಾಡಲಾಯಿತು.