ಉಕ್ರೇನ್-ರಷ್ಯಾ ಯುದ್ಧ ಮತ್ತೊಂದು ಹಂತಕ್ಕೆ ಕಾಲಿಟ್ಟಿದ್ದು, ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾದಿಂದ ಉಕ್ರೇನ್‌ನ ಒಡೆಸ್ಸಾಗೆ ಚಲಿಸುತ್ತಿವೆ ಎಂದು ಅಮೆರಿಕ ಹೇಳಿದೆ
ರಷ್ಯಾದ ಹಲವಾರು ಯುದ್ಧನೌಕೆಗಳು ಕ್ರೈಮಿಯಾ ಮಾರ್ಗವಾಗಿ ಒಡೆಸ್ಸಾಗೆ ಹೋಗುತ್ತಿವೆ ಎಂದು US ಅಧಿಕಾರಿ ಹೇಳಿದರು. ಉಕ್ರೇನ್‌ನ ಮೂರನೇ ಅತಿದೊಡ್ಡ ನಗರದ ಮೇಲೆ ಅತಿದೊಡ್ಡ ದಾಳಿ ಸಂಭವಿಸಬಹುದು ಎಂದು ಅಧಿಕಾರಿ ಎಚ್ಚರಿಸಿದ್ದಾರೆ.
ಖರ್ಸನ್ ನಗರವನ್ನು ರಷ್ಯಾದ ಪಡೆಗಳು ಇಂದು ಮುಂಜಾನೆ ಸ್ವಾಧೀನಪಡಿಸಿಕೊಂಡಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದ ನಂತರ ಈ ಮಾಹಿತಿ ಬಂದಿದೆ.
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ 8 ನೇ ದಿನದಂದು, ಕ್ರೈಮಿಯಾದಿಂದ ರಷ್ಯಾದ ಯುದ್ಧನೌಕೆಗಳು ಈಗ ಉಕ್ರೇನಿಯನ್ ನಗರವಾದ ಒಡೆಸ್ಸಾ ಕಡೆಗೆ ಚಲಿಸುತ್ತಿದ್ದು, ಈ ಯುದ್ಧನೌಕೆಗಳಲ್ಲಿ ಯುದ್ಧ ವಿಮಾನಗಳು ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಬಾಂಬ್ ಗಳು ಇವೆ. ಯುದ್ಧ ನೌಕೆ ದಾಳಿಗೆ ಉಕ್ರೇನ್ ಮತ್ತಷ್ಟು ವಿನಾಶದಂಚಿಗೆ ತಲುಪುವ ಸಾಧ್ಯತೆ ಇದೆ. ರಷ್ಯಾದ ಪಡೆಗಳು ಕಪ್ಪು ಸಮುದ್ರದ ಬಳಿ ಬಂದರು ನಗರ ಒಡೆಸ್ಸಾವನ್ನು ಆಕ್ರಮಿಸಿಕೊಳ್ಳಲು ಯೋಜಿಸುತ್ತಿವೆ ಎಂದು ಹೇಳಲಾಗಿದೆ.