ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ. ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಉಕ್ರೇನ್ ಅರ್ಜಿ ಸಲ್ಲಿಸಿತ್ತು. ಉಕ್ರೇನ್ ಮನವಿಯನ್ನು ಯುರೋಪಿಯನ್ ಒಕ್ಕೂಟ ಒಪ್ಪಿಕೊಂಡಿದೆ. ಈ ಮೂಲಕ ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟ ಸೇರ್ಪಡೆಯಾಗಿದೆ.
ಉಕ್ರೇನ್ ಯುರೋಪಿಯನ್ ಒಕ್ಕೂಟ ಸೇರ್ಪಡೆಯಾಗುವುದನ್ನು ವಿರೋಧಿಸಿ ರಷ್ಯಾ ಕಳೆದ 16 ದಿನಗಳಿಂದ ಯುದ್ಧ ನಡೆಸಿದೆ. ಭೀಕರ ಯುದ್ಧಕ್ಕೆ ತತ್ತರಿಸಿದ್ದರೂ ಉಕ್ರೇನ್ ದಿಟ್ಟ ಹೋರಾಟವನ್ನೇ ನಡೆಸಿದೆ. ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಲೆನಿನ್ ಮನವಿ ಮಾಡಿದ್ದರು. ಆದರೆ, ಕಾದು ನೋಡುವ ತಂತ್ರ ಅನುಸರಿಸಿದ್ದ ಯುರೋಪಿಯನ್ ಒಕ್ಕೂಟ ಕೊನೆಗೂ ಉಕ್ರೇನ್ ಮನವಿಯನ್ನು ಒಪ್ಪಿಕೊಂಡಿದೆ. ಈ ಮೂಲಕ ಯುರೋಪಿಯನ್ ಒಕ್ಕೂಟಕ್ಕೆ ಉಕ್ರೇನ್ ಅಧಿಕೃತವಾಗಿ ಸೇರ್ಪಡೆಯಾಗಿದೆ. ರಷ್ಯಾ ವಿರುದ್ಧ 16 ದಿನಗಳಿಂದ ಎದೆಗುಂದದೆ ಹೋರಾಟ ನಡೆಸುತ್ತಿರುವ ಉಕ್ರೇನ್ ಗೆ ಆನೆಬಲ ಸಿಕ್ಕಂತಾಗಿದೆ.