ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಪೋಲೆಂಡ್ ನಲ್ಲಿರುವ ರಾಯಭಾರ ಕಚೇರಿಯಿಂದ ತುರ್ತು ಸಂದೇಶ ರವಾನೆ ಮಾಡಲಾಗಿದೆ.
ಬುಡೋಮಿಯರ್ಜ್ ಗಡಿಗೆ ಬರುವಂತೆ ಭಾರತೀಯರಿಗೆ ಸೂಚನೆ ನೀಡಲಾಗಿದೆ. ಉಕ್ರೇನ್ –ಪೋಲೆಂಡ್ ಗಡಿಯಲ್ಲಿರುವ ಬುಡೋಮಿರ್ಜ್ ಗೆ ಬರುವಂತೆ ಉಕ್ರೇನ್ ಪಶ್ಚಿಮ ಭಾಗದಲ್ಲಿರುವ ಭಾರತೀಯರಿಗೆ ಈ ಕುರಿತಾಗಿ ಸೂಚನೆ ನೀಡಲಾಗಿದೆ. ಇದೇ ವೇಳೆ ಶೆಹೈನಿ –ಮೆಡಿಕಾ ಗಡಿಗೆ ಬರದಂತೆ ಅಧಿಕಾರಿಗಳು ಭಾರತೀಯರಿಗೆ ಸೂಚನೆ ನೀಡಿದ್ದಾರೆ.
ಮೋಲ್ಡೋವಾ ಗಡಿಯಲ್ಲಿ ಭಾರತೀಯರಿಗೆ ವಸತಿ, ಆಹಾರ ಸೇರಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯ ಟ್ವೀಟ್ ಮಾಡಿದ್ದಾರೆ. ಗಡಿಗೆ ಬಂದ ಭಾರತೀಯರನ್ನು ಏರ್ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಭಾರತೀಯರ ರಕ್ಷಣೆಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.