ಉಕ್ರೇನ್ – ರಷ್ಯಾ ಮಧ್ಯೆ ಯುದ್ದದ ಕಾರ್ಮೋಡ ಕವಿದಿದ್ದು, ಅಮೆರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳ ನಿರಂತರ ಪ್ರಯತ್ನದ ಮಧ್ಯೆಯೂ ರಷ್ಯಾ ಉಕ್ರೇನ್ ಮೇಲೆ ದಾಳಿಗೆ ಸಿದ್ದವಾಗಿದೆ. ಇದಕ್ಕೆ ಪೂರ್ವಭಾವಿ ಎಂಬಂತೆ ರಷ್ಯಾದ ಹೊರಗೂ ಸೇನೆ ಬಳಸಲು ಅಧ್ಯಕ್ಷ ವ್ಲಾದಿಮರ್ ಅವರಿಗೆ ಅಲ್ಲಿನ ಸಂಸತ್ತು ಗ್ರೀನ್ ಸಿಗ್ನಲ್ ನೀಡಿದೆ.
ಈಗಾಗಲೇ ಉಕ್ರೇನ್ ನ ಎರಡು ಪ್ರಾಂತ್ಯಗಳನ್ನು ಪ್ರತ್ಯೇಕ ಎಂದು ಘೋಷಿಸಿರುವ ವ್ಲಾದಿಮಿರ್ ಪುಟಿನ್ ಆ ಪ್ರದೇಶದಲ್ಲಿ ಶಾಂತಿ ಕಾಪಾಡಲು ತನ್ನ ಪಡೆ ಕಳಿಸಿರುವುದಾಗಿ ಘೋಷಿಸಿದ್ದಾರೆ. ಇಲ್ಲಿ ಪ್ರತ್ಯೇಕತಾವಾದಿಗಳು ರಷ್ಯಾ ಸೇನೆಗೆ ಬೆಂಬಲ ನೀಡುತ್ತಿದ್ದಾರೆಂದು ಹೇಳಲಾಗಿದೆ. ಇದರ ಮಧ್ಯೆ ತುರ್ತು ಪತ್ರಿಕಾಗೋಷ್ಟಿ ನಡೆಸಿರುವ ವ್ಲಾದಿಮಿರ್ ಪುಟಿನ್, ಉಕ್ರೇನ್ ತನ್ನ ಸೇನೆ ಹಿಂಪಡೆದುಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಯುದ್ದ ಭೀತಿ ಹಿನ್ನಲೆಯಲ್ಲಿ ಉಕ್ರೇನ್ ನಲ್ಲಿದ್ದ 200 ಕ್ಕೂ ಅಧಿಕ ಭಾರತೀಯರು ಕಳೆದ ರಾತ್ರಿ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾರೆ. ಇನ್ನಷ್ಟು ವಿಮಾನಗಳು ಉಕ್ರೇನ್ ಗೆ ತೆರಳಲಿದ್ದು, ಮತ್ತಷ್ಟು ಭಾರತೀಯರನ್ನು ಕರೆ ತರಲಿವೆ ಎಂಧು ಮೂಲಗಳು ತಿಳಿಸಿವೆ.