ಭಾರತೀಯ ಪಿಂಚಣಿದಾರರ 28 ಕೋಟಿ ಖಾತೆಗಳ ಮಾಹಿತಿ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ ಎಂದು ಉಕ್ರೇನ್ ಮೂಲದ ಭದ್ರತಾ ಸಂಶೋಧಕರು ಮಾಹಿತಿ ನೀಡಿದ್ದಾರೆ.
ಉದ್ಯೋಗಿಗಳ ಭವಿಷ್ಯ ನಿಧಿ ಪಿಂಚಣಿ (ಇಪಿಎಫ್ಓ) ಖಾತೆದಾರರ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ಸೇರಿದಂತೆ ಇತರೆ ಮಾಹಿತಿಗಳು ಆನ್ಲೈನ್ ನಲ್ಲಿ ಸೋರಿಕೆಯಾಗಿದೆ ಎಂದು ಭದ್ರತಾ ಸಂಶೋಧಕ ಬಾಬ್ ಡಿಯಾಂಕೊ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಎರಡು ಪ್ರತ್ಯೇಕ ಐಪಿ ಅಡ್ರೆಸ್ ಗಳನ್ನು ಪತ್ತೆ ಹಚ್ಚಿರುವುದಾಗಿ ಬಾಬ್ ಡಿಯಾಂಕೊ ತಿಳಿಸಿದ್ದು, ಆದರೆ ತನ್ನ ಖಾತೆದಾರರ ಮಾಹಿತಿ ಸೋರಿಕೆಯಾಗಿರುವ ಕುರಿತು ಇಪಿಎಫ್ಓ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.