ಈ ವಿಚಿತ್ರ ಸ್ಟೋರಿಯನ್ನು ಓದಿದ್ರೆ ನಿಮಗೆ ಅಚ್ಚರಿಯೆನಿಸಬಹುದು. ರಾತ್ರಿ ಬಡವರಾಗಿದ್ದವರು ಬೆಳಗೆದ್ದಾಗ ಸಿರಿವಂತರಾಗಿರುವವರ ಕಥೆಗಳನ್ನು ನೀವು ಕೇಳಿರಬಹುದು. ಆದರೆ, ಇಲ್ಲೊಬ್ಬಳು ಮಹಿಳೆ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ತನ್ನ ಭಾಷೆಯ ಉಚ್ಛಾರವೇ ಬದಲಾಗಿರುವ ಅಚ್ಚರಿಯ ಘಟನೆ ನಡೆದಿದೆ.
ಲಿಂಕನ್‌ಶೈರ್‌ನ ನಿವಾಸಿಯಾದ ಜೊಯಿ ಕೋಲ್ಸ್, ಎಂಬಾಕೆಯ ಭಾಷೆ ಜರ್ಮನ್. ಆದರೆ, ಒಂದು ದಿನ ಬೆಳಗೆದ್ದಾಗ ವೆಲ್ಷ್ ಭಾಷೆ ಉಚ್ಛಾರಣೆಯಾಗಿ ಬದಲಾಗಿದ್ದು, ಸ್ವತಃ ಆಕೆಗೇ ನಂಬಲು ಸಾಧ್ಯವಾಗಿಲ್ಲ. ಕೇವಲ ಒಂದು ದಿನ ಅಲ್ಲ ಇದು 6 ವಾರಗಳ ನಂತರವೂ ಮುಂದುವರೆಯುತ್ತದೆ. ಬೇರೆ ದೇಶಕ್ಕೆ ಕಾಲಿಡದೆ ವಿದೇಶದ ಭಾಷೆಯ ಉಚ್ಛಾರಣೆ ತನಗೆ ಹೇಗೆ ಬರಲು ಸಾಧ್ಯವಾಯಿತು ಅನ್ನೋದು ಆಕೆಗೆ ಅರ್ಥವಾಗಲಿಲ್ಲ.
ಜೊಯಿ ಅವರು ವಿದೇಶಿ ಉಚ್ಚಾರಣಾ ಸಿಂಡ್ರೋಮ್ ಹೊಂದಿರಬಹುದು ಎಂದು ಶಂಕಿಸಿದ್ರು. ಮೂಲತಃ ಜರ್ಮನ್ ಉಚ್ಛಾರಣೆ ಆಗಿರುವುದು, ವೆಲ್ಷ್ ಆಗಿ ಹೇಗೆ ಮಾರ್ಪಟ್ಟಿತು ಎಂಬುದೇ ಆಕೆಗೆ ತಿಳಿಯದಾಯಿತು. ತನ್ನ ಸ್ಥಿತಿಯು ನರವೈಜ್ಞಾನಿಕಕ್ಕೆ ಸಂಬಂಧಿಸಿರಬಹುದು ಎಂದು ಜೋಯ್ ಭಯಪಟ್ಟಳು. ಹೀಗಾಗಿ ಟಿಕ್‌ಟಾಕ್ ಮೂಲಕ ವೈದ್ಯಕೀಯ ಆರೈಕೆಗಾಗಿ ಆಕೆ ಮನವಿ ಮಾಡಿದ್ದಾಳೆ.
ಅಂದಹಾಗೆ, ವೆಲ್ಷ್ ಎಂಬುದು ವೆಲ್ಷ್ ಜನರಿಗೆ ಸ್ಥಳೀಯವಾಗಿರುವ ಬ್ರಿಟಾನಿಕ್ ಉಪಗುಂಪಿನ ಸೆಲ್ಟಿಕ್ ಭಾಷೆಯಾಗಿದೆ. ಈ ಭಾಷೆಯನ್ನು ವೇಲ್ಸ್‌ನಲ್ಲಿ ಸ್ಥಳೀಯವಾಗಿ ಮಾತನಾಡುತ್ತಾರೆ. ಇಂಗ್ಲೆಂಡ್‌ನಲ್ಲಿ ಸಹ ಕೆಲವರು ಈ ಭಾಷೆ ಮಾತನಾಡುತ್ತಾರೆ. ಆದರೆ, ಆ ಭಾಷೆಯನ್ನು ಮಾತನಾಡುವ ಪ್ರದೇಶಕ್ಕೆ ಭೇಟಿ ನೀಡದೆ ಈ ಮಹಿಳೆ ಅದು ಹೇಗೆ ವೆಲ್ಷ್ ಉಚ್ಛಾರಣೆಯಲ್ಲಿ ಮಾತನಾಡಲು ಸಾಧ್ಯವಾಯಿತು ಅನ್ನೋದು ಆಶ್ಚರ್ಯಕರವಾಗಿದೆ.