ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ದಿನಗಳು ಬರುತ್ತವೆ. ಆ ಕಷ್ಟಕ್ಕೆ ಭಯಪಟ್ಟು ಕೆಲವರು ಸೋಲುಂಡ್ರೆ ಮತ್ತೆ ಕೆಲವರು ಕಷ್ಟವನ್ನು ಗೆದ್ದು ಗಟ್ಟಿ ಎನ್ನಿಸಿಕೊಳ್ತಾರೆ. ಇದಕ್ಕೆ ಬ್ರಿಟನ್ ನಲ್ಲಿ ವಾಸವಾಗಿರುವ 30 ವರ್ಷದ ಮಿಚಲ್ ಮೋರ್ಗನ್ ಉತ್ತಮ ನಿದರ್ಶನ. 2019ರಲ್ಲಿ ಕಷ್ಟದ ಜೀವನ ನೋಡಿದ ಮಿಚಲ್, ಈಗ ಮನೆಯಲ್ಲೇ ಕುಳಿತು ಪ್ರತಿ ತಿಂಗಳು 40 ಲಕ್ಷ ರೂಪಾಯಿವರೆಗೆ ಸಂಪಾದನೆ ಮಾಡ್ತಿದ್ದಾಳೆ.
ಮಿಚಲ್ ಪತಿ 2019ರಲ್ಲಿ ವಿಚ್ಛೇದನ ನೀಡಿದ್ದ. ವಿಚ್ಛೇದನ ಪಡೆದ ಕೆಲವೇ ದಿನಗಳಲ್ಲಿ ಮೂರು ವರ್ಷದ ನಾಯಿ ಸಾವನ್ನಪ್ಪಿತ್ತು. ವಿಚ್ಛೇದನಕ್ಕಿಂತ ನಾಯಿ ಸಾವನ್ನಪ್ಪಿರುವುದು ಮಿಚಲ್ ಗೆ ಹೆಚ್ಚು ಆಘಾತ ನೀಡಿತ್ತು. ಮೂರು ವಾರಗಳ ಕಾಲ ಮಿಚಲ್ ಹಾಸಿಗೆಯಿಂದ ಎದ್ದಿರಲಿಲ್ಲ. ಎಲ್ಲ ಕಷ್ಟವನ್ನು ಎದುರಿಸುವ ಧೈರ್ಯ ತೆಗೆದುಕೊಂಡು ಮತ್ತೆ ಮಿಚಲ್ ಎದ್ದು ಬಂದಳು.
ಆರ್ಟ್ ವರ್ಕ್ ಗೆ ಹೆಚ್ಚು ಗಮನ ನೀಡಿದ ಮಿಚಲ್, ಕೆಲ ತಿಂಗಳುಗಳ ಕಾಲ ಡಿಜಿಟಲ್ ಆರ್ಟ್ ವರ್ಕ್ ಕೋರ್ಸ್ ಮಾಡಿದಳು. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದೇ ಮಿಚಲ್ 1 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿದ್ದಾಳೆ. ಅನೇಕ ದೊಡ್ಡ ಕಂಪನಿಗಳು ಮಿಚಲ್ ಗೆ ಕೆಲಸ ನೀಡಲು ಮುಂದೆ ಬಂದಿವೆ. ಮಿಚಲ್ ಈಗಾಗಲೇ Vogue, Prada, Chanel ಮತ್ತು Christian Dior ಕಂಪನಿಯಲ್ಲಿ ಕೆಲಸ ಮಾಡಿದ್ದಾಳೆ.