alex Certify ʼಕಾಂಟ್ಯಾಕ್ಸ್​ ಲೆನ್ಸ್ʼ ಧರಿಸುವವರು ಓದಲೇಬೇಕು ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಂಟ್ಯಾಕ್ಸ್​ ಲೆನ್ಸ್ʼ ಧರಿಸುವವರು ಓದಲೇಬೇಕು ಈ ಸುದ್ದಿ

25 ವರ್ಷದ ಯುವತಿಯೊಬ್ಬರ ಕಣ್ಣಿನ ಕಾರ್ನಿಯಾದಲ್ಲಿ ಹುಣ್ಣು ಬೆಳೆದಿದ್ದು ಇದರ ಪರಿಣಾಮವಾಗಿ ಆಕೆ ಹೆಚ್ಚು ಕಮ್ಮಿ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾಳೆ. ಬ್ರಿಟನ್​​ನ ಕಾರ್ಡಿಫ್​​​ನಲ್ಲಿ ಈ ಘಟನೆ ಸಂಭವಿಸಿದೆ. ಕೆಲವೊಮ್ಮೆ ಅಲ್ಸರ್​​​ ಕಾಂಟ್ಯಾಕ್ಟ್​ ಲೆನ್ಸ್​​​​ಗಳಿಂದ ಬರುತ್ತೆ ಎನ್ನಲಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಸ್ಟೆಫ್​ ಕರಾಸ್ಕೊ ಎಂಬ ಯುವತಿ ಕಾಂಟ್ಯಾಕ್ಸ್​ ಲೆನ್ಸ್​ಗಳಿಂದ ಸ್ವಲ್ಪ ಕಿರಿಕಿರಿ ಅನುಭವಿಸಿದ್ದಾರೆ. ಇದಾದ ಬಳಿಕ ಕರಾಸ್ಕೊ ಕಣ್ಣಿನ ವೈದ್ಯರನ್ನು ಭೇಟಿ ಮಾಡಿದ್ದಾರೆ. ಪರೀಕ್ಷೆಯ ಸಂದರ್ಭದಲ್ಲಿ ಕರಾಸ್ಕೊ ಕಣ್ಣಿನಲ್ಲಿ ಆಕ್ರಮಣಕಾರಿ ಬ್ಯಾಕ್ಟಿರಿಯಾ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಕಣ್ಣಿನಲ್ಲಿ ತೆರೆದ ಹುಣ್ಣು ಇರೋದ್ರಿಂದ ಕಾರ್ನಿಯಲ್​ ಅಲ್ಸರ್​ನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ಈ ರೀತಿಯ ಆರೋಗ್ಯ ಸಮಸ್ಯೆ ಇರುವವರು ಕುರುಡತನಕ್ಕೆ ಒಳಗಾಗುತ್ತಿದ್ದಾರೆ ಎಂದು ಕ್ಲೀವ್ಲ್ಯಾಂಡ್​ ಕ್ಲಿನಿಕ್​ ಹೇಳಿದೆ.

ಯುವತಿಗೆ ಕಣ್ಣಿನ ದೃಷ್ಟಿ ವಾಪಸ್​ ನೀಡಬೇಕು ಅಂತಾ ಆಕೆಗೆ ಪ್ರತಿದಿನ 72 ಹನಿ ಆಂಟಿಬಯಾಟಿಕ್​​ ನೀಡಲಾಗುತ್ತಿತ್ತು. ಆದರೂ ಆಕೆಯ ಕಣ್ಣಿನ ಹುಣ್ಣು ಕಡಿಮೆಯಾಗದೇ ಆಕೆಗೆ ತುರ್ತು ಕಾರ್ನಿಯಲ್​ ಕಸಿ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...