ತನ್ನ ಪ್ರಜೆಗಳ ಮೇಲೆ ಕೋವಿಡ್ ಲಸಿಕೆಯ ಕಠಿಣ ನಿರ್ಬಂಧಗಳ ವಿರುದ್ಧ ಬಹಳಷ್ಟು ಬಾರಿ ಎಚ್ಚರಿಕೆ ನೀಡುತ್ತಲೇ ಬಂದ ಭಾರತ ಇದೀಗ ತಿರುಗೇಟಿನ ರೂಪದಲ್ಲಿ ತನ್ನ ಗಡಿಯೊಳಗೆ ಕಾಲಿಡುವ ಬ್ರಿಟನ್ ಪ್ರಜೆಗಳಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
ಅಕ್ಟೋಬರ್ ನಲ್ಲಿ ಪ್ರತಿ ದಿನ 1 ಕೋಟಿ ಲಸಿಕೆ ನೀಡಲು ನಡೆದಿದೆ ತಯಾರಿ
ಬ್ರಿಟನ್‌ನಿಂದ ಭಾರತಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕನೂ ಸಹ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರ ತರುವುದಲ್ಲದೇ ದೇಶದೊಳಗೆ ಕಾಲಿಟ್ಟ 10 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.
ಕೋವಿಶೀಲ್ಡ್ ಲಸಿಕೆಗೆ ಅಧಿಕೃತ ಮನ್ನಣೆ ನೀಡಬೇಕೆಂದು ಬ್ರಿಟನ್‌ನೊಂದಿಗೆ ಸಾಕಷ್ಟು ಬಾರಿ ಮಾತುಕತೆಗಳ ಮೂಲಕ ವಿನಂತಿಸಿಕೊಂಡರೂ ಸಹ ಯಾವುದೇ ಪ್ರಯೋಜನವಾಗದೇ ಈ ನಡೆಯನ್ನು ಭಾರತ ತೆಗೆದುಕೊಂಡಿದೆ.
ಪಾಲಕರಿಗೆ ಖುಷಿ ಸುದ್ದಿ…..! ಬಂದಿದೆ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್
ಈ ಹೊಸ ಪ್ರಯಾಣ ಮಾರ್ಗಸೂಚಿಗಳು ಅಕ್ಟೋಬರ್ 4ರಿಂದ ಜಾರಿಗೆ ಬರಲಿವೆ. ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ಇವೆಲ್ಲವನ್ನೂ ಮಾಡಬೇಕಾಗುತ್ತದೆ:
– ಭಾರತಕ್ಕೆ ಪ್ರಯಾಣಿಸುವ 72 ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.
– ಭಾರತದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.
– ಭಾರತಕ್ಕೆ ಆಗಮಿಸಿದ ಎಂಟನೇ ದಿನ ಕೋವಿಡ್-19 ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಬೇಕು.
– ಮನೆಯಲ್ಲಿ ಅಥವಾ ಭೇಟಿ ನೀಡಲಿರುವ ಸ್ಥಳದಲ್ಲಿ ಹತ್ತು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕು.
ಈ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಲು ಗೃಹ ಹಾಗೂ ವಿಮಾನಯಾನ ಸಚಿವಾಲಯಗಳು ಕ್ರಮ ತೆಗೆದುಕೊಳ್ಳಲಿವೆ.