ಲಂಡನ್: ಆಫ್ಘಾನಿಸ್ಥಾನ ನಿರಾಶ್ರಿತರಿಗೆ ಬ್ರಿಟನ್ ನಲ್ಲಿ ಪುನರ್ವಸತಿ ಘೋಷಿಸಲಾಗಿದೆ. ಮೊದಲ ವರ್ಷದಲ್ಲಿ 5000 ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಿದ್ದು, ದೀರ್ಘಕಾಲದಲ್ಲಿ 20 ಸಾವಿರ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ನಿಂದ ಪಲಾಯನ ಮಾಡುವ ಆಫ್ಘನ್ನರಿಗೆ ಬ್ರಿಟನ್ ಪುನರ್ವಸತಿ ಯೋಜನೆಯನ್ನು ಘೋಷಿಸಿದೆ, ರಾಯಭಾರ ಸಿಬ್ಬಂದಿ ಸೇರಿದಂತೆ ಯುಕೆ ಪ್ರಜೆಗಳನ್ನು ವಾಪಸ್ ಕರೆತರಲು ಸುಮಾರು 900 ಬ್ರಿಟಿಷ್ ಸೈನಿಕರನ್ನು ಅಫ್ಘಾನ್ ರಾಜಧಾನಿಗೆ ಕಳುಹಿಸಲಾಗಿದೆ.
ಅಫ್ಘಾನ್ ಮಹಿಳೆಯರು, ಮಕ್ಕಳು ಮತ್ತು ಬೆದರಿಕೆ, ಕಿರುಕುಳಗಳನ್ನು ಎದುರಿಸುತ್ತಿರುವವರು, ಅತ್ಯಂತ ಅಪಾಯದಲ್ಲಿರುವವರಿಗೆ ಆದ್ಯತೆ ನೀಡಲಾಗುವುದು, ಅವರಿಗೆ ಬ್ರಿಟನ್‌ನಲ್ಲಿ ಅನಿರ್ದಿಷ್ಟವಾಗಿ ಉಳಿಯುವ ಅವಕಾಶವನ್ನು ನೀಡಲಾಗುವುದು ಎಂದು ಲಂಡನ್ ಹೇಳಿದೆ.