ದೇಶವೆಲ್ಲಾ ಕೋವಿಡ್ ಲಾಕ್‌ಡೌನ್ ನಲ್ಲಿ ಸಿಲುಕಿರುವ ನಡುವೆ ತಮ್ಮ ಅಧಿಕೃತ ನಿವಾಸದಲ್ಲಿ ’ನಿಮ್ಮ ಎಣ್ಣೆ ನೀವೇ ಕೊಂಡು ಬನ್ನಿ’ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ದೇಶವಾಸಿಗಳ ಕ್ಷಮೆಯಾಚಿಸಿದ್ದಾರೆ.
ಘಟನೆ ಸಂಬಂಧ ಬೋರಿಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ ಈ ಕ್ಷಮಾಪಣೆ ಕೇಳಿ ಬಂದಿದೆ. ಮೇ 20, 2020ರಲ್ಲಿ ಈ ಪಾರ್ಟಿಯನ್ನು 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಆಯೋಜಿಸಿದ್ದಾಗಿ ಬೋರಿಸ್ ಜಾನ್ಸನ್ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಏರುತ್ತಲೇ ಇದೆ ಮೋದಿ ಗ್ರಾಫ್: ಟ್ವಿಟರ್‌ನಲ್ಲಿ ಏಳು ಕೋಟಿ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ
“ನಿಯಮಗಳನ್ನು ಮಾಡುವ ಮಂದಿ ವಾಸಿಸುವ ಡೌನಿಂಗ್ ಸ್ಟ್ರೀಟ್‌ನಲ್ಲೇ ನಿಯಮಗಳ ಪಾಲನೆಯಾಗುತ್ತಿಲ್ಲ ಎಂದಾಗ ನನ್ನ ಮೇಲೆ ಹಾಗೂ ನನ್ನ ಸರ್ಕಾರದ ಮೇಲೆ ಅವರಿಗೆ ಅದೆಂಥಾ ಸಿಟ್ಟು ಬರುತ್ತದೆ ಎಂದು ನನಗೆ ಅರ್ಥವಾಗುತ್ತದೆ” ಎಂದು ಜಾನ್ಸನ್ ಹೇಳಿಕೊಂಡಿದ್ದಾರೆ.
ಬ್ರಿಟನ್ ಅನ್ನು ಐರೋಪ್ಯ ಒಕ್ಕೂಟದಿಂದ ಪೂರ್ಣವಾಗಿ ಹೊರತರುವುದಾಗಿ ಮಾತು ಕೊಟ್ಟು 2019ರ ಚುನಾವಣೆಯಲ್ಲಿ ದೊಡ್ಡ ಬಹುಮತದಿಂದ ಅಧಿಕಾರಕ್ಕೆ ಮರಳಿದ ಜಾನ್ಸನ್ ತಮ್ಮ ಈ ನಡೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
“ನಾನು ಆ ಉದ್ಯಾನಕ್ಕೆ ಮೇ 20, 2020ರ ಸಂಜೆ ಆರು ಗಂಟೆ ಬಳಿಕ ಹೋಗಿ, ನನ್ನ ಕಚೇರಿಗೆ ತೆರಳುವ ಮುನ್ನ ಸಿಬ್ಬಂದಿಯ ಸಮೂಹವೊಂದಕ್ಕೆ ಧನ್ಯವಾದ ತಿಳಿಸಲು ಹೋಗಿದ್ದೆ. ನಾನು ಎಲ್ಲರನ್ನೂ ಒಳಗೆ ಕಳುಹಿಸಬೇಕಿತ್ತು,” ಎಂದಿದ್ದಾರೆ ಬೋರಿಸ್.