ಲಿವರ್‌ಪೂಲ್‌ನಲ್ಲಿರುವ ತನ್ನ ಮನೆಯನ್ನು 12,000ಕ್ಕೂ ಹೆಚ್ಚಿನ ವಿಎಚ್‌ಎಸ್ ಟೇಪುಗಳ ಸಂಗ್ರಹಾಗಾರ ಮಾಡಿಕೊಂಡಿರುವ ವ್ಯಕ್ತಿಯೊಬ್ಬರು ಅತ್ಯಪರೂಪದ ಟೇಪುಗಳನ್ನು ಸಂಗ್ರಹಿಸಿದ್ದಾರೆ.
’ದಿ ಮೇಯರ್’ ಎಂದು ಕರೆಯಲಾಗುವ ಈತ ತನ್ನ ಮನೆಯಲ್ಲಿ ಬ್ಲಾಕ್ ಬಸ್ಟರ್ ಸ್ಟೋರ್ ಒಂದನ್ನು ಹೊಂದಿದ್ದು, ವೈಭವದ ಹಿಂದಿನ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತಾರೆ.
1993ರಲ್ಲಿ ಈ ಕಲೆಕ್ಷನ್ ಅನ್ನು ಆರಂಭಿಸಿದ ದಿ ಮೇಯರ್, ಆರಂಭದಲ್ಲಿ ವಿಡಿಯೋ ಸ್ಟೋರ್ ಒಂದನ್ನು ತೆರೆಯಲು ಇಚ್ಛಿಸಿದ್ದರು. ಆದರೆ ಡಿವಿಡಿಗಳು ಬಂದ ಕಾರಣದಿಂದ ಈತನ ಯೋಜನೆಗಳು ಹಳ್ಳ ಹಿಡಿದವು.
ಅಡಲ್ಟ್ ಸೈಟ್ ನಲ್ಲಿ ಖಾತೆ ತೆರೆದ ವಸ್ತು ಸಂಗ್ರಹಾಲಯ..! ನಗ್ನ ಫೋಟೋ ಪೋಸ್ಟ್
“ವಿಡಿಯೋಗಳು ಸಾಯುತ್ತಿರುವ ನಡುವೆಯೇ ನಾನು ವಿಎಚ್‌ಎಸ್ ಟೇಪುಗಳನ್ನು ಸಂಗ್ರಹಿಸುವ ನನ್ನ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋದೆ. ಅದಾಗಲೇ ನನ್ನ ಟೇಪ್‌ಗಳಲ್ಲಿದ್ದ ವಿಡಿಯೋಗಳ ಡಿವಿಡಿಗಳನ್ನು ಖರೀದಿ ಮಾಡುವುದರಲ್ಲಿ ಅರ್ಥವಿಲ್ಲದ ಕಾರಣ ಸುಮ್ಮನೇ ದುಡ್ಡು ಖರ್ಚು ಮಾಡುವುದು ನನಗೆ ಬೇಕಿರಲಿಲ್ಲ,” ಎಂದು ದಿ ಮೇಯರ್ ಲಿವರ್‌ಪೂಲ್ ಎಕೋಗೆ ತಿಳಿಸಿದ್ದಾರೆ. ಈ ಟೇಪುಗಳ ಗುಣಮಟ್ಟ ಉತ್ಕೃಷ್ಟವಾಗಿದ್ದು, ಡಿವಿಡಿಗಳಂತೆ ದಿನಗಳೆದಂತೆ ಹಾಳಾಗುವುದಿಲ್ಲ.
ಸಾಮಾಜಿಕ ಭದ್ರತೆ ನೀಡುತ್ತೆ ಮೋದಿ ಸರ್ಕಾರದ ಈ 5 ಯೋಜನೆ: ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ
1970ರ ದಶಕದ ಟೇಪುಗಳನ್ನೂ ದಿ ಮೇಯರ್ ತಮ್ಮ ಸಂಗ್ರಹದಲ್ಲಿ ಹೊಂದಿದ್ದಾರೆ. ಮೇಯರ್ ಬಳಿ ಇರುವ ಅನೇಕ ಟೇಪುಗಳನ್ನು ಜಗತ್ತಿನ ಬೇರೆಡೆಗಳಲ್ಲಿ ಕಾಣಲು ಸಿಗುವುದಿಲ್ಲ. ದೇಶದೆಲ್ಲೆಡೆ ಸಂಚರಿಸಿ ಈ ಟೇಪುಗಳನ್ನು ಸಂಗ್ರಹಿಸಿರುವ ದಿ ಮೇಯರ್, ಕೆಟಲಾಗ್ ಆರ್ಡರ್ ಸಂಖ್ಯೆಯ ಆಧಾರದಲ್ಲಿ ವಿಎಚ್‌ಎಸ್ ಟೇಪುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟಿದ್ದಾರೆ.