ಆಕಾಶದಲ್ಲಿ ಬೃಹತ್ ಗಾಳಿ ಬಲೂನ್ ನಲ್ಲಿ ತೆರಳುವುದು ಭಯಾನಕ ಅನುಭವವಾದರೂ ಮನರಂಜನೆಯೂ ಆಗಿದೆ. ಆದಾಗ್ಯೂ 20,000 ಅಡಿ ಎತ್ತರದಲ್ಲಿ ಸಾಹಸ ಮಾಡುವುದು ನಿಜಕ್ಕೂ ಸಾಧನೆಯೇ ಸರಿ.
ಯುಕೆಯ ಮೈಕ್ ಹೊವಾರ್ಡ್ ಎಂಬ ವ್ಯಕ್ತಿ 21,400 ಅಡಿ ಎತ್ತರದಲ್ಲಿ ಎರಡು ಏರ್ ಬಲೂನ್ ಗಳನ್ನು ಸಂಪರ್ಕಿಸುವ ಲೋಹದ ಹಲಗೆಯ ಮಧ್ಯೆ ನಡೆಯುವ ಮುಖಾಂತರ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದರು.
2004 ರ ಈ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ.
ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಬೆತ್ತಲೆ ಫೋಟೋ, ವಿಡಿಯೋ: ಹುಡುಗಿಗೆ ಕಿರುಕುಳ ನೀಡಿದ ಇಬ್ಬರು ಅರೆಸ್ಟ್
ನೋಡಲು ಭಯಾನಕ ಎಂದೆನಿಸುವ ಈ ವಿಡಿಯೋದಲ್ಲಿ ಮೈಕ್ ಹೊವಾರ್ಡ್ ಮೊದಲಿಗೆ ಒಂದು ಬಲೂನ್ ನಿಂದ ಮತ್ತೊಂದು ಬಲೂನ್ ಗೆ ಸಂಪರ್ಕ ಕಲ್ಪಿಸುವ ಲೋಹದ ಹಲಗೆಯಲ್ಲಿ ನಡೆದು ಸಾಗಿದ್ದಾರೆ. ಬಳಿಕ ಮತ್ತೆ ತಿರುಗಿ ಬರುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಲಗೆಯಲ್ಲಿ ನಡೆಯುವ ಮುಖಾಂತರ ಸಾಹಸ ಮೆರೆದಿದ್ದಾರೆ.
ಸದ್ಯ, ಈ ವಿಡಿಯೋ ಮತ್ತೊಮ್ಮೆ ಭಾರಿ ವೈರಲ್ ಆಗಿದ್ದು, 70,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ, ನೆಟ್ಟಿಗರನ್ನು ತಬ್ಬಿಬ್ಬುಗೊಳಿಸಿದೆ.
https://youtu.be/Vpg2bdAft3M