ವಯಸ್ಕರಾಗುತ್ತಲೇ ಜೀವನದ ಪ್ರತಿಯೊಂದು ಹೊಣೆಗಾರಿಕೆಯೂ ಹೆಗಲ ಮೇಲೆ ಬೀಳತೊಡಗುತ್ತವೆ. ಬ್ರಿಟನ್‌ನಲ್ಲಿ ದಿನೇ ದಿನೇ ಏರುತ್ತಿರುವ ಬಾಡಿಗೆ ದರದಿಂದ ತತ್ತರಿಸಿರುವ ವ್ಯಕ್ತಿಯೊಬ್ಬರು ತಮ್ಮ ದಿನನಿತ್ಯದ ವೆಚ್ಚವನ್ನು ತಗ್ಗಿಸಲು ಹೊಸ ಐಡಿಯಾವೊಂದನ್ನು ಮಾಡಿದ್ದಾರೆ.
ಹ್ಯಾರಿಸನ್ ಮಾರ್ಷಲ್ ಹೆಸರಿನ ಈ 28 ವರ್ಷ ವಯಸ್ಸಿನ ಈತ ತ್ಯಾಜ್ಯದ ಕಂಟೇನರ್ ಒಂದನ್ನು ಪುಟಾಣಿ ಮನೆಯನ್ನಾಗಿ ಮಾರ್ಪಾಡಾಗಿಸಿದ್ದಾರೆ. ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಈ ಸ್ಕಿಪ್ ಹೋಂನಲ್ಲಿ ವಾಸಿಸಲು ಮಾರ್ಷಲ್ ನಿರ್ಧರಿಸಿದ್ದಾರೆ ಎಂದು ವರದಿ ಮಾಡಿದೆ ನ್ಯೂಯಾರ್ಕ್ ಪೋಸ್ಟ್.
ಟಿಂಬರ್ ಫ್ರೇಂ ಬಳಸಿಕೊಂಡು ಇದೇ ಪುಟಾಣಿ ಮನೆಯಲ್ಲಿ ಅಡುಗೆ ಮನೆ ಹಾಗೂ ಮಲಗುವ ಕೋಣೆ ನಿರ್ಮಿಸಿಕೊಂಡಿರುವ ಮಾರ್ಷಲ್, ಒಳಗಡೆ ಪುಟ್ಟದೊಂದು ಫ್ರಿಡ್ಜ್ ಹಾಗೂ ವಾರ್ಡ್ ರೋಬ್ ಇಟ್ಟುಕೊಳ್ಳಲು ಸಹ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಆದರೆ ಈ ಮನೆಯಲ್ಲಿ ಟಾಯ್ಲೆಟ್ ಹಾಗೂ ಸ್ನಾನದ ಮನೆಯ ವ್ಯವಸ್ಥೆ ಇಲ್ಲ. ಆದರೆ ಮನೆಯನ್ನು ಬೆಚ್ಚಗಿಡಲು ಹೀಟರ್ ಬಳಸಲು ಬೇಕಾದ ವಿದ್ಯತ್ ಶಕ್ತಿಯನ್ನು ಪಡೆಯಲು ಹತ್ತಿರದ ಗ್ರಿಡ್‌ಗೆ ಮನೆಯನ್ನು ಸಂಪರ್ಕಿಸಿಕೊಂಡಿದ್ದಾರೆ ಮಾರ್ಷಲ್. 25 ಚದರ ಮೀಟರ್‌ನಷ್ಟು ಪುಟ್ಟದಾದ ಈ ಸಣ್ಣ ಮನೆಯಲ್ಲಿ ವಾಸಿಸಲು ಸಹ ಮಾರ್ಷಲ್ ತಿಂಗಳಿಗೆ $90 (7000 ರೂ.) ವ್ಯಯಿಸುತ್ತಿದ್ದಾರಂತೆ.