ಜನರ ಹವ್ಯಾಸವೇ ವಿಭಿನ್ನ, ವಿಚಿತ್ರ. ಇಲ್ಲೊಬ್ಬ ಮಹಾಶಯ ಪ್ರಪಂಚದಾದ್ಯಂತ ಸೆಲೆಬ್ರಿಟಿಗಳ ಸಮಾಧಿಗೆ ಭೇಟಿ ಕೊಡಲು ಬರೋಬ್ಬರಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದ್ದಾರೆ.
ಮಾರ್ಕ್ ಡಬ್ಸ್ ಎಂಬ ಉತ್ಸಾಹಿ ಪ್ರಪಂಚದಾದ್ಯಂತ ನೂರಾರು ಸೆಲಬ್ರೆಟಿಗಳ ಸಮಾಧಿಗೆ ಭೇಟಿಕೊಟ್ಟಿದ್ದು, ಈಗ ವಿಶ್ವದ ಡೆಡಿಕೇಟೆಡ್ ಸ್ಮಶಾನ ಪ್ರವಾಸಿಗ ಎಂದು ಕರೆಯಬಹುದು.
ವಾಷಿಂಗ್ಟನ್ನ ಸಿಯಾಟಲ್ನಲ್ಲಿರುವ ಮಾರ್ಷಲ್ ಆರ್ಟ್ಸ್ ಸೆನ್ಸೇಷನ್ ಬ್ರೂಸ್ ಲೀ ಮತ್ತು ಚೀನಾದ ಬೀಜಿಂಗ್ನಲ್ಲಿರುವ ಮಾವೋ ಸೇರಿದಂತೆ ಅವರು, ವಾಷಿಂಗ್ಟನ್ ಡಿಸಿಯಲ್ಲಿರುವ ಜಾನ್ ಎಫ್ ಕೆನಡಿ ಮತ್ತು ಲಾಸ್ ಏಂಜಲೀಸ್ನಲ್ಲಿರುವ ಮರ್ಲಿನ್ ಮನ್ರೋ ಅವರ ಸಮಾಧಿಗಳಿಗೆ ಭೇಟಿ ನೀಡಿದ್ದಾರೆ.
49 ವರ್ಷದ ಮಾರ್ಕ್ ಸಮಾಧಿ ಮಾಡದ ಮೂವರು ಪ್ರಧಾನ ಮಂತ್ರಿಗಳನ್ನು ಹೊರತುಪಡಿಸಿ, ನಾನು ಬಹುಶಃ ನಮ್ಮ ಎಲ್ಲಾ ಪ್ರಧಾನಿಗಳ ಸಮಾಧಿಗಳಿಗೆ ಭೇಟಿ ನೀಡಿದ್ದೇನೆ ಎದು ಹೇಳಿಕೊಂಡಿದ್ದಾರೆ. ಪ್ರಸಿದ್ಧ ಕ್ರೀಡಾಪಟು, ಕವಿ, ಸಮಾಧಿ ವೀಕ್ಷಿಸಿದ್ದು, ಇತಿಹಾಸ ಮತ್ತು ಪ್ರಚಲಿತ ವಿದ್ಯಮಾನಗಳು ನಿಜವಾಗಿಯೂ ನನಗೆ ಕುತೂಹಲ ಕೆರಳಿಸುತ್ತವೆ. ಚರ್ಚಿಲ್ ಮತ್ತು ರೂಸ್ವೆಲ್ಟ್ ಸಮಾಧಿಗೆ ಭೇಟಿ ನೀಡಿದ್ದ ನಾನು ಸ್ಟಾಲಿನ್ ಅವರ ಸಮಾಧಿ ನೋಡಲು ಮತ್ತೊಮ್ಮೆ ಮಾಸ್ಕೋಗೆ ಭೇಟಿ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಥಿಯೋಡರ್ ರೂಸ್ವೆಲ್ಟ್ ಸಮಾಧಿಗೆ ಭೇಟಿ ನೀಡಿದ ಘಟನೆಯನ್ನು ಮಾರ್ಕ್ ನೆನಪಿಸಿಕೊಳ್ಳುತ್ತಾರೆ. ಸಮಾಧಿಯು ಕೆಲವು ರೇಲಿಂಗ್ಗಳ ಹಿಂದೆ ಇತ್ತು ಮತ್ತು ಗೇಟ್ಗಳನ್ನು ಮುಚ್ಚಲಾಗಿತ್ತು. ಆದ್ದರಿಂದ ಅದನ್ನು ಸಮೀಪಿಸಲಾಗಲಿಲ್ಲ. ಆದರೂ ಏಣಿಯನ್ನು ಹುಡುಕಿ ಮೇಲಕ್ಕೆ ಏರಿದ್ದು, ಏಣಿಯು ಕುಸಿಯಿತು. ಇದರಿಂದ ಹಲವಾರು ಗಂಟೆಗಳ ಕಾಲ ಅಲ್ಲಿಯೇ ಬಂಧಿಯಾಗಬಹುದೆಂದು ಹೆದರಿದ್ದೆ ಎಂದು ಅಲ್ಲಿನ ಘಟನೆ ನೆನಪಿಸಿಕೊಂಡಿದ್ದಾರೆ. ಒಟ್ಟಾರೆ ಸಮಾಧಿ ಪ್ರವಾಸಕ್ಕೆ ಅವರು ಈವರೆಗೆ 1,53,27,944 ರೂ. ಖರ್ಚು ಮಾಡಿದ್ದಾರೆ.