ತನ್ನ ಮನೆಯಿಂದ ದೂರವಿದ್ದು ಬೇರೆ ನಗರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ರಜೆಯಲ್ಲಿ ನಿವಾಸಕ್ಕೆ ಹಿಂದಿರುಗಿದವನಿಗೆ ಶಾಕ್ ಆದ ಘಟನೆ ಇಂಗ್ಲೆಂಡ್ ನ ಲುಟಾನ್ ನಲ್ಲಿ ನಡೆದಿದೆ.
ರೆವರೆಂಡ್ ಮೈಕ್ ಹಾಲ್ ಎಂಬಾತ ಉತ್ತರ ವೇಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ನೆರೆಹೊರೆಯವರು ಕರೆ ಮಾಡಿದ್ದಾರೆ. ಹಾಲ್ ಮನೆಗೆ ಬೇರೆ ಯಾರೋ ಪ್ರವೇಶಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಊರಿನ ಮನೆಗೆ ಹಿಂತಿರುಗಿದ ಹಾಲ್ ಗೆ ತನ್ನ ನಿವಾಸದಲ್ಲಿ ಬೇರೆ ಯಾರೋ ಇರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.
ತನ್ನ ಮನೆಯಲ್ಲಿ ಪೀಠೋಪಕರಣಗಳು, ಕಾರ್ಪೆಟ್ ಗಳು ಮುಂತಾದವುಗಳನ್ನೆಲ್ಲಾ ಕದಿಯಲಾಗಿದೆ ಹಾಗೂ ತನ್ನ ಮನೆಯಲ್ಲಿ ಬೇರೆ ಯಾರೋ ಬಂದು ನೆಲೆಸಿದ್ದಾರೆ ಎಂದು ಮೈಕ್ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾನೆ.
ಮೈಕ್ ಬಂದ ನಂತರ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಲ್ಡರ್ ಹೊರಟು ಹೋಗಿದ್ದು, ಹೊಸ ಮಾಲೀಕರು ಮನೆಯನ್ನು ಖರೀದಿ ಮಾಡಿದ್ದಾರೆ. ಹೊಸ ಮಾಲೀಕರ ಪ್ರಕಾರ, ಅವರು ಜುಲೈನಲ್ಲಿ 131,000 ಪೌಂಡ್ (ಸುಮಾರು ರೂ. 1,33,00,000) ಗೆ ಮನೆಯನ್ನು ಖರೀದಿಸಿದ್ದರು.
ಮನೆಯನ್ನು ಮಾರಾಟ ಮಾಡಲು ಮೈಕ್ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಮತ್ತು ನಕಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ಭೂ ನೋಂದಣಿ ದಾಖಲೆಗಳಲ್ಲಿ ಸಹ ಹೊಸ ಖರೀದಿದಾರನ ಹೆಸರನ್ನು ಮನೆಯ ಮಾಲೀಕರಾಗಿ ನೋಂದಾಯಿಸಲಾಗಿದೆ ಎಂದು ವರದಿಯಾಗಿದೆ. ಮೈಕ್‌ನ ಹೆಸರಿನಲ್ಲಿ ನಕಲಿ ದಾಖಲೆಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.