ನಿದ್ರೆ ಮಾಡುತ್ತಿದ್ದ ವೇಳೆ ತಾನು ಏಳು ಲಕ್ಷ ರೂಗಳನ್ನು ಕದ್ದಿರುವ ವಿಚಾರವನ್ನು ಬಾಯಿ ಬಿಟ್ಟ ಮಡದಿ ವಿರುದ್ಧ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ಕೊಟ್ಟಿರುವ ಘಟನೆ ಬ್ರಿಟನ್‌ನಲ್ಲಿ ಜರುಗಿದೆ.
ರುತ್ ಫೋರ್ಡ್, (47) ನಿದ್ರೆ ವೇಳೆ ತಾವು ಮಾಡಿದ ಅಪರಾಧವೊಂದನ್ನು ಹೀಗೆ ಒಪ್ಪಿಕೊಂಡಿದ್ದಾರೆ. ಲ್ಯಾಡ್‌ಬೈಬಲ್ ವರದಿ ಪ್ರಕಾರ, ಕೇರ್ ಹೋಂನಲ್ಲಿ ತಾವು ನೋಡಿಕೊಳ್ಳಬೇಕಿದ್ದ ಗಾಲಿಕುರ್ಚಿ ಅವಲಂಬಿತ ಮಹಿಳೆಯೊಬ್ಬರಿಂದ ರುತ್ 7,200 ಪೌಂಡ್ (7,29,766ರೂ) ಕದ್ದಿದ್ದರು.
ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ಹೋಮ್ ಲೋನ್ ಇನ್ಶೂರೆನ್ಸ್ ಮೇಲೆ ಪ್ರತ್ಯೇಕ ತೆರಿಗೆ ವಿನಾಯಿತಿ ಲಾಭ
ತನ್ನ ಮಡದಿ ನಿದ್ರೆ ಮಾಡವಾಗ ಹೀಗೆ ಹೇಳಿಕೊಂಡ ವಿಚಾರವನ್ನು ಖುದ್ದು ಆಕೆಯ ಪತಿ ಆಂಟೋನಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಮೆಕ್ಸಿಕೋದಲ್ಲಿ ಕುಟುಂಬದ ಹಾಲಿಡೇ ವೇಳೆ ತಮ್ಮ ಮಡದಿ ಸಿಕ್ಕಾಪಟ್ಟೆ ಖರ್ಚು ಮಾಡಿದ್ದನ್ನು ಕಂಡ ಆಂಟೋನಿಗೆ ಆಕೆಯ ಮೇಲೆ ಅನುಮಾನ ಬಂದಿತ್ತು. ಒಂದು ತಿಂಗಳ ಬಳಿಕ ರುತ್ ನಿದ್ರೆ ಮಾಡುತ್ತಿದ್ದ ವೇಳೆ, ದಿವ್ಯಾಂಗಿ ಮಹಿಳೆಯ ವಾಲೆಟ್‌ನಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ಮತ್ತು ಆಕೆಯ ದುಡ್ಡಿನ ಬಗ್ಗೆ ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದು, ಆಕೆಯ ವಿರುದ್ಧ ದೂರು ಕೊಟ್ಟಿದ್ದಾರೆ.
ಕೂಡಲೇ ಎದ್ದು ಹೋಗಿ ರುತ್ ಪರ್ಸ್ ನೋಡಿದ ಆಂಟೋನಿಗೆ ಆ ಪರ್ಸ್‌ನಿಂದ ಒಂದಷ್ಟು ನೋಟುಗಳು ಕೆಳಗೆ ಬಿದ್ದಿರುವುದು ಕಣ್ಣಿಗೆ ಬಿದ್ದಿದೆ.
ಘಟನೆ ಬಳಿಕ ಆಂಟೋನಿ ಮತ್ತು ರುತ್ ಪ್ರತ್ಯೇಕವಾಗಿದ್ದಾರೆ.